ಬೆಂಗಳೂರು: ದೆಹಲಿಯ ಕೆಂಪುಕೋಟೆಯಲ್ಲಿ ರಾರಾಜಿಸಲಿ ಅಥವಾ ಪುಟ್ಟ ಹಳ್ಳಿಯಲ್ಲೇ ರಾರಾಜಿಸಲಿ ಎದ್ದು ನಿಂತು ರಾಷ್ಟ್ರಧ್ವಕ್ಕೆ ಗೌರವಾರ್ಪಣೆ ಮಾಡುವುದು ಅಪ್ಪಟ ದೇಶಪ್ರೇಮಿಗಳಾದ ನಮ್ಮ ಕರ್ತವ್ಯ. ಆದರೆ ಹಳ್ಳಿಯಿಂದ ದಿಲ್ಲಿಯವರೆಗೆ ಹಾರಾಡುವ ರಾಷ್ಟ್ರಧ್ವಜಗಳು ನಿರ್ಮಾಣವಾಗುವುದು ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ, ಅದರಲ್ಲೂ ಮಹಿಳೆಯರೇ ರಾಷ್ಟ್ರಧ್ವಜವನ್ನು ತಯಾರಿಸುತ್ತಿದ್ದಾರೆ ಎಂಬುದು ಮತ್ತೊಂದು ವಿಶೇಷ.
ಹುಬ್ಬಳ್ಳಿಯ ಬೆಂಗೇರಿ ಪ್ರದೇಶದ ತುಳಸಿಗಿರಿಯಲ್ಲಿ ಕರ್ನಾಟಕ ಖಾದಿ ಗ್ರಾಮೊದ್ಯೋಗ ಸಂಯುಕ್ತ ಸಭೆ, ಭಾರತದ ಏಕೈಕ ಅಧಿಕೃತ ರಾಷ್ಟ್ರಧ್ವಜ ತಯಾರಿಕ ಸಂಸ್ಥೆ.
ತುಳಸಿಗಿರಿಯ ಮಹಿಳೆಯರು ದಿಲ್ಲಿಯಿಂದ ಹಳ್ಳಿಯವರೆಗೆ ಪೂರೈಕೆಯಾಗುವ ರಾಷ್ಟ್ರಧ್ವಜಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪುರುಷರು ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವುದಿಲ್ಲ ಎಂಬ ಕಾರಣಕ್ಕೆಯೇ ರಾಷ್ಟ್ರಧ್ವಜವನ್ನು ತಯಾರಿಸುವ ಕಾಯಕಕ್ಕೆ ಮಹಿಳೆಯರನ್ನೇ ಈ ಸಂಸ್ಥೆ ನೇಮಿಸಿಕೊಳ್ಳುತ್ತಿದೆ.
‘ಅಳತೆಯನ್ನು ಸರಿಯಾಗಿಟ್ಟು ಹೊಲಿಯುವಷ್ಟು ತಾಳ್ಮೆ ಪುರುಷರಿಗೆ ಇರುವುದಿಲ್ಲ, ಈ ಕಾರ್ಯಕ್ಕೆ ಮಹಿಳೆಯರೇ ಸೂಕ್ತ’ ಎನ್ನುತ್ತಾರೆ ಸಂಸ್ಥೆಯ ಮೇಲ್ವಿಚಾರಕಿ ಅನ್ನಪೂರ್ಣ ಕೋಟಿ.
ಸರ್ಕಾರಿ ಸ್ವಾಮ್ಯದ ಈ ಸಂಸ್ಥೆಯಲ್ಲಿ 400 ಮಂದಿ ಕೆಲಸಕ್ಕಿದ್ದಾರೆ, ಕಾಟನ್ ಸ್ಪಿನ್ ಮಾಡುವುದು, ಹಗ್ಗ ನೇಯುವುದು, ಹೊಲಿಯುವುದು ಎಲ್ಲಾ ಕಾಯಕ ಮಹಿಳೆಯರದ್ದೆ. ತುಸು ಲೋಪವಿದ್ದರೂ ಬಟ್ಟೆಯನ್ನು ತಿರಸ್ಕರಿಸಲಾಗುತ್ತದೆ. ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಿಯೇ ರಾಷ್ಟ್ರಧ್ವಜವನ್ನು ಇಲ್ಲಿ ತಯಾರಿಸಲಾಗುತ್ತದೆ.
ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೆ, ಶಾಲಾ, ಕಾಲೇಜುಗಳಿಗೆ, ಇಲಾಖೆಗಳಿಗೆ ಇಲ್ಲಿಂದಲೇ ರಾಷ್ಟ್ರಧ್ವಜ ಪೂರೈಕೆಯಾಗುತ್ತದೆ. ಕಳೆದ ವರ್ಷ 10 ಸಾವಿರ ಧ್ವಜಗಳನ್ನು ಇವರು ಪೂರೈಕೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.