ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಅತೀ ಹೆಚ್ಚು ಬಾರಿ ವಿಧಾನಸಭೆ ವಿರೋಧ ಪಕ್ಷದ ನಾಯಕನಾದ ದಾಖಲೆ ಮಾಡಿದ್ದಾರೆ.
1994ರ ಡಿಸೆಂಬರ್ 27ರಿಂದ 1996ರ ಡಿಸೆಂಬರ್ 18ರವರೆಗೆ ಮೊದಲ ಬಾರಿಗೆ ಇವರು ವಿಪಕ್ಷ ನಾಯಕರಾಗಿದ್ದರು, ಈ ವೇಳೆ ಜೆಡಿಎಸ್ನ ಎಚ್.ಡಿ ದೇವೇಗೌಡ ಸಿಎಂ ಆಗಿದ್ದರು. ಎರಡನೇ ಬಾರಿಗೆ 2004ರ ಜೂನ್ 10ರಿಂದ 2006ರ ಫೆಬ್ರವರಿ 3ರವರೆಗೆ ಇವರು ವಿಪಕ್ಷ ನಾಯಕರಾಗಿದ್ದರು, ಈ ವೇಳೆ ಕಾಂಗ್ರೆಸ್ನ ಧರಂ ಸಿಂಗ್ ಸಿಎಂ ಆಗಿದ್ದರು.
2018ರ ಮೇ 25ರಿಂದ ಅವರು ಮೂರನೇ ಬಾರಿಗೆ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಅತೀಹೆಚ್ಚು ಬಾರಿಗೆ ವಿಪಕ್ಷ ನಾಯಕನಾದ ದಾಖಲೆ ನಿರ್ಮಿಸಿದ್ದಾರೆ.
ಅಧಿವೇಶನದ ದಿನವಾದ ಇಂದು ವಿಪಕ್ಷ ನಾಯಕನ ಕೊಠಡಿಯನ್ನು ಅಲಂಕರಿಸಿ, ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.