ನವದೆಹಲಿ: ಐಎನ್ಎಸ್ವಿ ತಾರಿಣಿಯಲ್ಲಿ ನೌಕಾ ಪಡೆಯ ಆರು ಮಂದಿ ಮಹಿಳೆಯರು ವಿಶ್ವ ನೌಕಾಯಾನ ನಡೆಸಿ ಯಶಸ್ವಿಯಾದ ಬಳಿಕ ಇದೀಗ, ನೌಕಾ ಕಮಾಂಡರ್ ಅಭಿಲಾಷ್ ಟೋಮಿ ಅವರು ಏಕಾಂಗಿಯಾಗಿ ನೌಕಾಯಾನದ ಮೂಲಕ ವಿಶ್ವ ಸಂಚಾರಕ್ಕೆ ಸಜ್ಜಾಗಿದ್ದಾರೆ.
ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ರೇಸ್ನ ಭಾಗವಾಗಿ ಇವರು, ವಿಶ್ವ ನೌಕಾಯಾನ ನಡೆಸಲಿದ್ದಾರೆ. ಅದು ಕೂಡ ನಾನ್ ಸ್ಟಾಪ್ ಆಗಿ. ಫ್ರಾನ್ಸ್ನ ಡಿ’ಒಲನ್ನೆ ಹಾರ್ಬರ್ನಿಂದ ಇವರ ಯಾನ ಆರಂಭಗೊಳ್ಳಲಿದೆ. ಏಷ್ಯಾದಿಂದ ಇದಕ್ಕೆ ಆಯ್ಕೆಗೊಂಡ ಏಕೈಕ ಭಾರತೀಯ ಅಭಿಲಾಷ್ ಆಗಿದ್ದಾರೆ.
ಈ ರೇಸ್ನ ನಿಯಮದ ಪ್ರಕಾರ 1968ಗಿಂತ ಈಚಿನ ತಂತ್ರಜ್ಞಾನ, ವಿನ್ಯಾಸದ ದೋಣಿಯನ್ನು ಬಳಸುವಂತಿಲ್ಲ. ಹೀಗಾಗಿ ಜಿಪಿಎಸ್ ವ್ಯವಸ್ಥೆ, ಸೆಟ್ಲೈಟ್ ಕಮ್ಯೂನಿಕೇಶನ್, ನೇವಿಗೇಶನ್ ಏಡ್ಗಳು ಇದರಲ್ಲಿ ಇರುವುದಿಲ್ಲ.
2019ರ ಎಪ್ರಿಲ್ ವೇಳೆ ಗೋಲ್ಡನ್ ಗ್ಲೋಬ್ ರೇಸ್ ಮುಕ್ತಾಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.