ನವದೆಹಲಿ: ಹೆಚ್ಚಿನ ಭಾರತೀಯರು ತಮ್ಮ ಸ್ವಂತ ಭಾಷೆಯಲ್ಲೇ ಇಂಟರ್ನೆಟ್ ಬಳಸಲು ಉತ್ಸುಕತೆ ತೋರಿಸುತ್ತಿದ್ದಾರೆ. 2021ರ ವೇಳೆಗೆ ಸುಮಾರು 536 ಮಿಲಿಯನ್ ಬಳಕೆದಾರರು ಭಾರತೀಯ ಭಾಷೆಯಲ್ಲಿ ಇಂಟರ್ನೆಟ್ ಬಳಸಲಿದ್ದಾರೆ. ಇದರಿಂದಾಗಿ ಡಿಜಿಟಲ್ ಜಾಹೀರಾತಿನ ಶೇ.35ರಷ್ಟು ಜಾಹೀರಾತು ಸ್ಥಳಿಯ ಭಾಷೆಯಲ್ಲೇ ಪ್ರಸಾರವಾಗುತ್ತದೆ ಎಂದು ಇಂಟರ್ನೆಟ್ ದೈತ್ಯ ಗೂಗಲ್ ಹೇಳಿದೆ.
ಪ್ರಸ್ತುತ 2 ಬಿಲಿಯನ್ ಡಾಲರ್ ಜಾಹೀರಾತಿನಲ್ಲಿ ಸ್ಥಳಿಯ ಭಾಷೆಗಳ ಪಾಲು ಶೇ.5ರಷ್ಟು ಮಾತ್ರ ಇದೆ.
ಗೂಗಲ್ ಪ್ರಕಾರ, ಈಗಾಗಲೇ ಇಂಗ್ಲೀಷ್ಯೇತರ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಇಂಗ್ಲೀಷ್ ಬಳಕೆದಾರರ ಸಂಖ್ಯೆಯನ್ನು ಓವರ್ ಟೇಕ್ ಮಾಡಿದೆ. 234 ಮಿಲಿಯನ್ ಜನ ಇಂಗ್ಲೀಷ್ಯೇತರ ಭಾಷೆಗಳಲ್ಲಿ ಇಂಟರ್ನೆಟ್ ಬಳಸುತ್ತಿದ್ದಾರೆ. 175ಮಿಲಿಯನ್ ಜನ ಇಂಗ್ಲೀಷ್ನಲ್ಲಿ ಇಂಟರ್ನೆಟ್ ಬಳಸುತ್ತಿದ್ದಾರೆ.
ಇಂಗ್ಲೀಷೇತರ ಭಾಷೆಯಲ್ಲಿ ಇಂಟರ್ನೆಟ್ ಬಳಸುವವರ ಪೈಕಿ ತೆಲುಗು, ಮರಾಠಿ, ತಮಿಳು ಮತ್ತು ಬಂಗಾಳಿ ಭಾಷೆಯಲ್ಲಿ ಇಂಟರ್ನೆಟ್ ಬಳಸುವವರ ಪ್ರಮಾಣವೇ ಶೇ.30ರಷ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.