ನವದೆಹಲಿ: ಆಕ್ಸಿಟಾಸಿನ್ನ ದುರ್ಬಳಕೆಯನ್ನು ತಡೆಗಟ್ಟುವ ಸಲುವಾಗಿ ಜುಲೈ 1ರಿಂದ ಈ ಅಪಾಯಕಾರಿ ರಾಸಾಯನಿಕವನ್ನು ರಿಟೇಲ್ ಕೆಮಿಸ್ಟ್ನಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗುತ್ತಿದೆ. ಖಾಸಗಿ ಸಂಸ್ಥೆಗಳು ಈ ಡ್ರಗ್ನ ಉತ್ಪಾದನೆಯನ್ನು ಮಾಡದಂತೆ ಆರೋಗ್ಯ ಸಚಿವಾಲಯವು ಈಗಾಗಲೇ ಆದೇಶ ಹೊರಡಿಸಿದೆ.
ಜುಲೈ 1ರಿಂದ ಕೇವಲ ಕರ್ನಾಟಕ ಆಂಟಿಬಯೋಟಿಕ್ ಆಂಡ್ ಫಾರ್ಮಸಿಟಿಕಲ್ ಲಿಮಿಟೆಡ್ಗೆ ಮಾತ್ರ ಇದನ್ನು ಉತ್ಪಾದನೆ ಮಾಡುವ ಅವಕಾಶ ನೀಡಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ನೋಂದಾಯಿತ ಆಸ್ಪತ್ರೆಗಳು, ಕ್ಲಿನಿಕ್ಗಳು ಇವರಿಂದಲೇ ಆಕ್ಸಿಟಾಸಿನ್ನನ್ನು ಖರೀದಿ ಮಾಡಬೇಕಾಗುತ್ತದೆ.
ದನಗಳಿಂದ ಹೆಚ್ಚು ಹಾಲು ಪಡೆಯಲು ರೈತರು ಈ ರಾಸಾಯನಿಕವನ್ನು ಬಳಸುತ್ತಿದ್ದಾರೆ. ಹಾಲು ಕರೆಯುವ ಎರಡು ಗಂಟೆ ಮೊದಲು ಇದನ್ನು ಇಂಜೆಕ್ಟ್ ಮಾಡಿದರೆ ಹೆಚ್ಚು ಹಾಲು ದೊರೆಯುತ್ತದೆ ಎಂಬ ಕಾರಣಕ್ಕೆ ಈ ಅಪಾಯಕಾರಿ ಡ್ರಗ್ನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ಇದು ಪ್ರಾಣಿಗಳಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ಡ್ರಗ್ನ್ನು ಹೆರಿಗೆಯ ಸಂದರ್ಭಗಳಲ್ಲಿ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಇವುಗಳ ಅವಶ್ಯಕತೆ ಆಸ್ಪತ್ರೆಗಳಿಗಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.