ಶಿಲ್ಲಾಂಗ್ : ಕಳೆದ ಕೆಲವು ವರ್ಷಗಳಿಂದ ಮೇಘಾಲಯದ ಗಾರೋ ಹಿಲ್ಸ್ ಎಂಬಲ್ಲಿ ದೆಹಲಿ ಮೂಲದ ಮೂವರು ಹಿಂದೂಗಳು ವಾಸವಾಗಿದ್ದು ತಾವಿರುವ ಪ್ರದೇಶದಲ್ಲಿ ಹಿಂದುಗಳ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.
ಈ ದೂರನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ರಾಷ್ಟ್ರೀಯ ಮಾನವ ಹಕ್ಕು ಆಯೋಗ ರಾಜ್ಯ ಮುಖ್ಯಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗೆ ಪತ್ರವನ್ನು ರವಾನಿಸಿದ್ದಾರೆ. ಮಾತ್ರವಲ್ಲ ಕೇಂದ್ರ ಗೃಹ ಸಚಿವರಿಗೆ ಮತ್ತು ಪ್ರಧಾನಿ ಕಾರ್ಯಾಲಯಕ್ಕೂ ದೂರಿನ ಪ್ರತಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಒಂದು ಶತಕಗಳಿಂದ ತುರುಪಟ್ಟಣದ ಗಾರೋ ಹಿಲ್ಸ್ನಲ್ಲಿ ಗೌಡಿಯ ಮಠದ ಕೆಳಭಾಗದಲ್ಲಿರುವ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸುತ್ತಿದ್ದರು.
ಗಾರೋ ಹಿಲ್ಸ್ನಲ್ಲಿ ಈ ಹಿಂದೆ ಬುಡಕಟ್ಟು ಜನಾಂಗದವರಿದ್ದರು. ಇತ್ತೀಚಿಗೆ ಅವರು ಕೈಸ್ತಧರ್ಮಕ್ಕೆ ಮತಾಂತರವಾಗಿದ್ದಾರೆ. ಈಗ ಕೈಸ್ತ ಸಮುದಾಯದವರ ಸಂಖ್ಯೆ ಹೆಚ್ಚಾಗುತ್ತಿದ್ದು ಕೈಸ್ತ ಎನ್.ಜಿ.ಒ ಗಳು, ಪರಿಸರದ ಕಾರಣಗಳನ್ನು ನೀಡಿ ಈ ಭಾಗದಲ್ಲಿ ಹಿಂದೂಗಳ ಅಂತ್ಯಕ್ರಿಯೆಯನ್ನು ನಡೆಸಲು ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಅದೇನೇ ಇರಲಿ ಈಶಾನ್ಯ ಭಾಗದ ರಾಜ್ಯಗಳಲ್ಲಿ ಮನುಷ್ಯರ ನಡುವೆ ಮಾನವೀಯತೆಗಿಂತ ಇತಂಹ ಕೆಲ ವಿಚಾರಗಳು ಕಂದಕ ಸೃಷ್ಟಿಸುತ್ತಿರುವುದು ಶೋಚನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.