ನವದೆಹಲಿ: ಆರು ಬೋಯಿಂಗ್ ಎಎಚ್-64ಇ ಅಪಾಚೆ ಹೆಲಿಕಾಫ್ಟರ್ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಅನುಮೋದನೆಯನ್ನು ನೀಡಿದ್ದು, ಇದರಿಂದ ದೇಶದ ರಕ್ಷಣಾ ಸಾಮರ್ಥ್ಯಕ್ಕೆ ಹೆಚ್ಚಿನ ಬಲ ಸಿಗಲಿದೆ.
ಭಾರತದ ಮನವಿಯಂತೆ ಅಟ್ಯಾಕ್ ಹೆಲಿಕಾಫ್ಟರ್ನ್ನು ಯುಎಸ್ ಮಾರಾಟ ಮಾಡುವುದರಿಂದ ಉಭಯ ರಾಷ್ಟ್ರಗಳ ನಡುವಣ ತಂತ್ರಗಾರಿಕಾ ಸಂಬಂಧ ವೃದ್ಧಿಯಾಗಲಿದೆ, ಭದ್ರತೆ ಸುಧಾರಿಸಲಿದೆ, ಇದರಿಂದ ದಕ್ಷಿಣ ಏಷ್ಯಾದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿ ಕಾಣಲಿದೆ ಎಂದು ಡಿಫೆನ್ಸ್ ಸೆಕ್ಯೂರಿಟಿ ಕಾರ್ಪೋರೇಶನ್ ಏಜೆನ್ಸಿ ಅಭಿಪ್ರಾಯಿಸಿದೆ.
ಬೋಯಿಂಗ್ ಅಪಾಚೆಯನ್ನು ಉತ್ಪಾದನೆ ಮಾಡುತ್ತಿದೆ. ಭಾರತದಲ್ಲಿ ಹೆಲಿಕಾಫ್ಟರ್ಗಳನ್ನು ಉತ್ಪಾದನೆಗೊಳಿಸಲು ಬೋಯಿಂಗ್ ಟಾಟಾ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಹೆಲಿಕಾಫ್ಟರ್ ಅಲ್ಲದೇ, 4 ಎಎನ್/ಎಪಿಜಿ-78 ಫೈಯರ್ ಕಂಟ್ರೋಲ್ ರ್ಯಾಡರ್, 180 ಎಜಿಎಂ-115ಎಲ್-3 ಹೆಲ್ಫೈಯರ್ ಲಾಂಗ್ಬೋ ಮಿಸೈಲ್, 90 ಎಜಿಎಂ-114ಆರ್-3 ಹೆಲ್ಫೈಯರ್ 11 ಮಿಸೈಲ್, 200 ಸ್ಟಿಂಗರ್ ಬ್ಲಾಕ್ 1-92ಎಚ್ ಮಿಸೈಲ್, ಜಿಪಿಎಸ್ ಇಂನರ್ಶಿಯಲ್ ನಾವಿಗೇಶನ್ ಸಿಸ್ಟಮ್, 30 ಎಂಎಂ ಕೆನ್ನಾನ್ಸ್, ಟ್ರಾನ್ಸ್ಪೋಂಡರ್ಸ್, ಸಿಮುಲೇಟರ್ಸ್, ಟ್ರೈನಿಂಗ್ ಪರಿಕರಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅನುಮೋದನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.