ನವದೆಹಲಿ: ಭಾರತೀಯ ರೈಲ್ವೇಯು ಎಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಮತ್ತು ನೋಂದಾಯಿಸಿದ ಹೆಚ್ಚುವರಿ ಲಗೇಜ್ಗಳಿಂದ ರೂ.42.15 ಕೋಟಿ ಆದಾಯವನ್ನು ಗಳಿಸಿದೆ.
ಈ ಅವಧಿಯಲ್ಲಿ ಒಟ್ಟು 7.59 ಲಕ್ಷ ಟಿಕೆಟ್ ರಹಿತ ಪ್ರಯಾಣಿಕರು ಸಿಕ್ಕಿ ಬಿದ್ದಿದ್ದಾರೆ. 7.25 ಲಕ್ಷ ನೋಂದಾಯಿಸದ ಲಗೇಜ್ ಪ್ರಕರಣಗಳು ದಾಖಲಾಗಿವೆ ಎಂದು ರೈಲ್ವೇ ತಿಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ರೈಲ್ವೇ ಇಂತಹ ಪ್ರಕರಣಗಳಿಂದ ರೂ.41.22 ಕೋಟಿ ಗಳಿಸಿತ್ತು. ಈ ಬಾರಿ ಈ ಆದಾಯ ಶೇ.2.25ರಷ್ಟು ಏರಿಕೆಯಾಗಿದೆ.
ಇಷ್ಟೇ ಅಲ್ಲದೇ 1517 ಮೀಸಲು ಪ್ರಯಾಣ ಟಿಕೆಟ್ಗಳ ವರ್ಗಾವಣೆ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದಂಡವಾಗಿ ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.