ಮಂಗಳೂರು : ಜೂನ್ 10, ಆದಿತ್ಯವಾರದಂದು, ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಅಂತರ್ಯೋಗ – ಆಧ್ಯಾತ್ಮಿಕ ಶಿಬಿರ ನಡೆಯಲಿದೆ. ಕಾರ್ಯಕ್ರಮವು ಪೂರ್ವಾಹ್ನ 9 ರಿಂದ ಅಪರಾಹ್ನ 4 ರವೆರೆಗೆ ಜರುಗಲಿದ್ದು ಆಸಕ್ತರಿಗೆ ಪ್ರವೇಶ ಮುಕ್ತವಾಗಿರುತ್ತದೆ. ಆಸಕ್ತರು 9 ಜೂನ್ ಒಳಗೆ ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು (ಕಾರ್ಯಾಲಯ – 0824-2414412)
ಕಾರ್ಯಕಮದಲ್ಲಿ ಅರ್ಚನೆ, ಭಜನೆ, ಧ್ಯಾನ, ಉಪನ್ಯಾಸ, ಪ್ರಶ್ನೋತ್ತರ ಮತ್ತು ಗಾನಕೀರ್ತನೆ ಕಾರ್ಯಕ್ರಮಗಳಿರುತ್ತದೆ. ದಾವಣಗೆರೆ ರಾಮಕೃಷ್ಣ ಮಿಷನ್ ನ ಮುಖ್ಯಸ್ಥರಾದ ಸ್ವಾಮಿ ನಿತ್ಯಸ್ಥಾನಂದಜಿಯವರು ಮೃತ್ಯುಚಿಂತನೆ ಎಂಬ ವಿಷಯವಾಗಿ ಹಾಗೂ ಮೈಸೂರು ರಾಮಕೃಷ್ಣ ಆಶ್ರಮದಿಂದ ಪ್ರಕಟಿತವಾಗುವ ವಿವೇಕಪ್ರಭ ಮಾಸಪತ್ರಿಕೆಯ ಸಂಪಾದಕರಾದ ಸ್ವಾಮಿ ಜ್ಞಾನಯೋಗಾನಂದಜಿಯವರು ಸಾಧನೆಯಲ್ಲಿ ಜಪದ ಮಹತ್ವ ಎಂಬ ವಿಷಯವಾಗಿ ಪ್ರವಚನ ನೀಡಲಿರುವರು. ಪ್ರವಚನಗಳ ನಂತರ ಪ್ರಶ್ನೋತ್ತರ ಕಾರ್ಯಕ್ರಮವಿರುತ್ತದೆ.
ಅಪರಾಹ್ನ 2 ರಿಂದ 4 ರವರೆಗೆ ಬೆಂಗಳೂರಿನ ಖ್ಯಾತ ಗಾಯಕರಾದ ಸುರಮಣಿ ದತ್ತಾತ್ರೇಯ ವೇಂಕರ್ ಅವರಿಂದ ಗಾನಕೀರ್ತನೆ ಕಾರ್ಯಕ್ರಮ ನಡೆಯಲಿದೆ. ಆಸಕ್ತರೆಲ್ಲರಿಗೂ ಆದರದ ಆಹ್ವಾನವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.