ಮಂಗಳೂರು : ವಿಧಾನ ಪರಿಷತ್ನಲ್ಲಿ ಶಿಕ್ಷಕ ಕ್ಷೇತ್ರದಿಂದ ಮತ್ತು ಪದವಿಧರ ಕ್ಷೇತ್ರದಿಂದ ಸೂಕ್ತ ಪ್ರತಿನಿಧಿಗಳು ಆಯ್ಕೆಯಾದಲ್ಲಿ ಆ ಕ್ಷೇತ್ರಗಳ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುತ್ತದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಅವರು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಬಲ್ಮಠ ಸರಕಾರಿ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಚುನಾವಣಾ ಪ್ರಚಾರ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಶಿಕ್ಷಕರ ಪ್ರತಿನಿಧಿಯಾಗಿ ವಿಧಾನಪರಿಷತ್ನಲ್ಲಿ ಇಲ್ಲಿಯ ತನಕ ಧ್ವನಿ ಎತ್ತಿ ಸಮಸ್ಯೆಗಳು ಪರಿಹಾರವಾಗುವ ತನಕ ಬೆಂಬಿಡದೆ ಪ್ರಯತ್ನ ಮಾಡುತ್ತಾ ಬರುತ್ತಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಮತ್ತೆ ಗೆಲ್ಲಿಸಿಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹಾಗೆ ಪದವಿಧರರ ಸಮಸ್ಯೆಗಳಿಗೆ ಧ್ವನಿ ಎತ್ತಲು ಆಯನೂರು ಮಂಜುನಾಥ್ ಅವರಂತಹ ನಿಷ್ಕಳಂಕ ಜನಪ್ರತಿನಿಧಿಗಳ ಅವಶ್ಯಕತೆ ವಿಧಾನಪರಿಷತ್ಗೆ ಇದೆ. ಇಂತಹ ನಾಯಕರನ್ನು ಗೆಲ್ಲಿಸಿಕೊಡುವ ಹೊಣೆ ನಮ್ಮ ಮೇಲಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.
ಕೆಎಂಸಿಯಲ್ಲಿ ಡೀನ್ ಡಾ| ಎಂ ವೆಂಕಟರಾಯ ಪ್ರಭು ಹಾಗೂ ಪ್ರೋ ವೈಸ್ ಚಾನ್ಸೆಲರ್ ಸುರೇಂದ್ರ ಶೆಟ್ಟಿ ಅವರು ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ಮಾತನಾಡಿದರು. ಸಂಜಯ ಪ್ರಭು, ಪ್ರಭಾ ಮಾಲಿನಿ, ಮಂಜುಳಾ ರಾವ್, ಸಂಧ್ಯಾ ವೆಂಕಟೇಶ್, ಪೂರ್ಣಿಮಾ ರಾವ್, ವಸಂತ ಪೂಜಾರಿ, ಕಾರ್ಪೋರೇಟರ್ ಪೂರ್ಣಿಮಾ, ಕಿರಣ್ ರೈ ಜೊತೆಗಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.