ತಿರುವನಂತಪುರಂ: ಬಹುನಿರೀಕ್ಷಿತ ನೈರುತ್ಯ ಮಾರುತ ಶುಕ್ರವಾರ ಕೇರಳವನ್ನು ಪ್ರವೇಶಿಸಿದ್ದು, ಕರಾವಳಿ ಭಾಗ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಈ ಮೂಲಕ ಪ್ರಸಕ್ತ ಸಾಲಿನ ಮುಂಗಾರು ಪ್ರಾರಂಭವಾಗಿದೆ.
ಮುಂದಿನ 24 ಗಂಟೆಗಳಲ್ಲಿ ಮಾರುತಗಳು ಕರ್ನಾಟಕವನ್ನು ಪ್ರವೇಶ ಮಾಡಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಮೇ 30ರಂದು ಕೇರಳಕ್ಕೆ ಮಾನ್ಸೂನ್ ಅಪ್ಪಳಿಸುವ ನಿರೀಕ್ಷೆ ಇತ್ತು, ಆದರೆ ನಾಲ್ಕು ದಿನ ತಡವಾಗಿ ಇಂದು ಕೇರಳವನ್ನು ಪ್ರವೇಶಿಸಿದೆ.
ಜೂನ್ ಅಂತ್ಯಕ್ಕೆ ಮಾನ್ಸೂನ್ ಉತ್ತರ ಭಾರತ ಪ್ರವೇಶಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.