ಪುಣೆ: ವೈದ್ಯಕೀಯ ಎಂಬುದು ಜನರ ಜೀವ ಉಳಿಸುವ ಅಮೂಲ್ಯ ಸೇವೆ. ಆದರೆ ಕೆಲ ವೈದ್ಯರು ಇದನ್ನೇ ದಂಧೆಯನ್ನಾಗಿಸಿ ಹಣ ಮಾಡುತ್ತಾರೆ. ಅಂತಹವರ ನಡುವೆ ಪುಣೆಯ ವೈದ್ಯ ಡಾ.ಅಭಿಜಿತ್ ಸೋನಾವನೆ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಯಾಕೆಂದರೆ ವೈದ್ಯರಾಗಿ ಅವರು ಮಾಡುತ್ತಿರುವ ಕಾರ್ಯ ಇಡೀ ನಾಗರಿಕ ಸಮಾಜಕ್ಕೆ ಮಾದರಿ ಎನಿಸುವಂಥದ್ದು.
ಪುಣೆಯ ಬೀದಿಗಳಲ್ಲಿ ಭಿಕ್ಷಾಟನೆ ಮಾಡುವವರನ್ನು, ವಸತಿ ಹೀನರನ್ನು ಇವರು ಬೀದಿಯಲ್ಲೇ ಪರೀಕ್ಷಿಸಿ ಅವರ ಆರೋಗ್ಯ ಸುಧಾರಿಸುವ ಕಾರ್ಯ ಮಾಡುತ್ತಾರೆ. ವಾರ ವಾರ ಇವರಿಗೆ ಉಚಿತ ಚಿಕಿತ್ಸೆ, ಉಚಿತ ಔಷಧಿಗಳನ್ನು ಹಂಚುತ್ತಾರೆ. ಅಗತ್ಯವಿರುವ ಎಲ್ಲಾ ಚಿಕಿತ್ಸೆಗಳನ್ನೂ ಒದಗಿಸುತ್ತಾರೆ. ಸರ್ಜರಿಗಳು ಅಗತ್ಯ ಬಿದ್ದರೆ ಅದನ್ನೂ ಉಚಿತವಾಗಿ ಮಾಡಿಸಿಕೊಡುತ್ತಾರೆ.
ದೇವಸ್ಥಾನ, ಮಸೀದಿ, ಇತರ ಧಾರ್ಮಿಕ ಸ್ಥಳಗಳಿಗೆ ತೆರಳಿ ಅಲ್ಲಿಯೂ ಭಿಕ್ಷುಕರ ಆರೋಗ್ಯ ತಪಾಸಣೆ ಮಾಡುತ್ತಾರೆ.
ಸೋಮವಾರ ಶಿವ ದೇವಾಲಯದಲ್ಲಿ, ಮಂಗಳವಾರ ದೇವಿ ದೇವಾಲಯಗಳಲ್ಲಿ, ಬುಧವಾರ ಗಣಪತಿ ದೇವಾಲಯಗಳಲ್ಲಿ, ಶುಕ್ರವಾರ ಮಸೀದಿಯಲ್ಲಿ, ಶನಿವಾರ ಹನುಮಾನ್ ದೇವಾಲಯದಲ್ಲಿ, ಭಾನುವಾರ ಚರ್ಚ್ಗಳಲ್ಲಿ ಇವರು ಭಿಕ್ಷುಕರ, ನಿರ್ಗತಿಕರ ಆರೋಗ್ಯ ತಪಾಸಣೆ ಮಾಡುತ್ತಾರೆ.
ಅವರು ಮಾಡುತ್ತಿರುವ ಈ ನಿಸ್ವಾರ್ಥ ಸೇವೆ ಜನಮನ್ನಣೆಗೆ ಪಾತ್ರವಾಗಿದೆ. ’ವೈದ್ಯೋ ನಾರಾಯಣೋ ಹರಿ:’ ಎಂಬ ಮಾತನ್ನು ಇವರು ನಿಜ ಮಾಡಿ ತೋರಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.