ನವದೆಹಲಿ: 48 ರಾಷ್ಟ್ರಗಳನ್ನೊಳಗೊಂಡ ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್(ಎನ್ಎಸ್ಜಿ)ನ ಸದಸ್ಯತ್ವ ಪಡೆಯಲು ಭಾರತದ ಮತ್ತೊಂದು ಸುತ್ತಿನ ತಂತ್ರಗಾರಿಕ ಪ್ರಯತ್ನ ಆರಂಭಿಸಲು ಮುಂದಾಗಿದೆ, ಇದಕ್ಕಾಗಿ ರಾಜತಾಂತ್ರಿಕ ಚಟುವಟಿಕೆಯಲ್ಲಿ ನಿರತವಾಗಿದೆ ಎನ್ನಲಾಗಿದೆ. ಈ ವರ್ಷದ ಜೂನ್ ಮತ್ತು ಡಿಸೆಂಬರ್ನಲ್ಲಿ ಎನ್ಎಸ್ಜಿ ಸಭೆ ನಡೆಯಲಿದೆ.
ಚೀನಾದ ಬಲವಾದ ವಿರೋಧದಿಂದಾಗಿ ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ದೊರೆಯುತ್ತಿಲ್ಲ. ನಾನ್ ಪ್ರೊಫಿಲರೇಶನ್ ಟ್ರೀಟಿಗೆ ಭಾರತ ಸಹಿ ಹಾಕದ ಹಿನ್ನಲೆಯಲ್ಲಿ ಎನ್ಎಸ್ಜಿ ಸದಸ್ಯತ್ವ ಕೊಡಲು ಸಾಧ್ಯವಿಲ್ಲ ಎಂಬ ವಾದವನ್ನು ಚೀನಾ ಮುಂದಿಟ್ಟಿದೆ. ಈ ಒಂದು ದೇಶದಿಂದಾಗಿ ಸದಸ್ಯತ್ವ ಪಡೆಯಲು ಅಡ್ಡಿಯಾಗುತ್ತಿದೆ ಎಂದು ಭಾರತ ಆರೋಪಿಸುತ್ತಲೇ ಬಂದಿದೆ.
ಈ ವಿಷಯದ ಬಗ್ಗೆ ಭಾರತ ಮತ್ತು ಚೀನಾದ ನಡುವೆ ಅಧಿಕಾರಿಗಳ ಮಟ್ಟದ ಸಭೆ ನಡೆಸಲು ಚಿಂತನೆ ನಡೆದಿದೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಇತ್ತೀಚಿಗೆ ಉತ್ತಮಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಚೀನಾವನ್ನು ಮನವೊಲಿಸುವ ಕಾಯ್ದತ್ತ ಭಾರತ ಚಿತ್ತ ಹರಿಸಿದೆ ಎನ್ನಲಾಗಿದೆ.
ಎನ್ಎಸ್ಜಿಗೆ ಸದಸ್ಯತ್ವ ದೊರೆತರೆ 2019ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನರೇಂದ್ರ ಮೋದಿ ಸರ್ಕಾರಕ್ಕೆ ದೊರೆತ ಅತೀದೊಡ್ಡ ಗೆಲುವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.