ಭಾರತದಲ್ಲಿ ಉದ್ಯಮಿಗಳು ತಮ್ಮ ಪ್ರಭಾವ ಹಾಗೂ ರಾಜಕೀಯ ವಶೀಲಿಬಾಜಿಯನ್ನು ಬಳಸಿ ಬ್ಯಾಂಕ್ಗಳಿಂದ ಉದ್ಯಮಗಳಿಗೆ ಕೆಲವು ಸಾವಿರ ಕೋಟಿಗಳಷ್ಟು ಬೃಹತ್ ಲೋನ್ಗಳನ್ನು ಪಡೆದು ನಂತರ ಉದ್ಯಮವನ್ನು ದಿವಾಳಿ ಎಂದು ಘೋಷಿಸಿ ಲೋನ್ ಮರುಪಾವತಿ ಮಾಡದೆ ಬ್ಯಾಂಕುಗಳನ್ನು ವಂಚಿಸುತ್ತಿದ್ದರು. ಹಳೆಯ ದಿವಾಳಿ ಕಾನೂನಿನಲ್ಲಿ ದಿವಾಳಿ ಎಂದು ಘೋಷಿಸಲ್ಪಟ್ಟ ಕಂಪೆನಿಗಳಿಂದ ಸಾಲ ಮರುಪಾವತಿ ಮಾಡಿಸಿಕೊಳ್ಳಲು ಅವಕಾಶವಿರಲಿಲ್ಲ. ಈ ಕಾನೂನಿನ ಲೋಪವನ್ನು ದುರುಪಯೋಗಿಸಿದ ಉದ್ಯಮಿಗಳು ಬ್ಯಾಂಕುಗಳ ಲೋನ್ ಅನ್ನು ಮರುಪಾವತಿಸದೆ ವಂಚಿಸುತ್ತಿದ್ದರು. ಮರುಪಾವತಿಯಾಗದ ಲೋನ್ಗಳನ್ನು NPA (Non Productive Assets) ಅಂತ ಘೋಷಿಸಿ ಬ್ಯಾಂಕುಗಳು ಸುಮ್ಮನಾಗುತ್ತಿದ್ದವು. ಭಾರತ ದೇಶದ ಬ್ಯಾಂಕ್ಗಳಲ್ಲಿ ಹಲವು ಲಕ್ಷ ಕೋಟಿ ರುಪಾಯಿಗಳ ಲೋನ್ಗಳು NPA ಗಳಾಗಿ ಪರಿವರ್ತನೆಗೊಂಡು ರಾಶಿಬಿದ್ದಿದ್ದವು. ಸಾರ್ವಜನಿಕರ ಹಣವು ಈ ರೀತಿಯಾಗಿ ಲೂಟಿಯಾಗುತ್ತಿತ್ತು.
ಆದರೆ ಮೋದಿ ಸರಕಾರವು ದಿವಾಳಿ ಕಾನೂನಿಗೆ (Insolvency and Bankruptcy Code) ತಿದ್ದುಪಡಿ ತಂದು ದಿವಾಳಿ ಎಂದು ಘೋಷಿಸಲ್ಪಟ್ಟ ಉದ್ಯಮ ಹಾಗೂ ಉದ್ಯಮಿಯ ಆಸ್ತಿಯನ್ನು ಮಾರಾಟ ಮಾಡಿ ಸಾಲವಸೂಲಾತಿ ಮಾಡುವ ವ್ಯವಸ್ಥೆಯನ್ನು ರೂಪಿಸಿತು. ಇದರ ಪರಿಣಾಮವಾಗಿ ಹಲವು ದಶಕಗಳಿಂದ ಸಾಲ ಮರುಪಾವತಿಮಾಡದೇ ಇದ್ದ 2100 ಉದ್ಯಮಿಗಳು ತಮ್ಮ ಆಸ್ತಿಯು ಸಂಪೂರ್ಣವಾಗಿ ತಮ್ಮ ಕೈಬಿಟ್ಟು ಹೋಗಲಿದೆ ಎಂದು ಹೆದರಿ ರುಪಾಯಿ 83000 ಕೋಟಿಗಳಷ್ಟು ಮೊತ್ತದ ಸಾಲವನ್ನು ಬ್ಯಾಂಕ್ಗಳಿಗೆ ಮರುಪಾವತಿ ಮಾಡಿದ್ದಾರೆ.
ಇದು ಮೋದಿ ಸರಕಾರದ ಅತೀ ದೊಡ್ಡ ಸಾಧನೆಯಾಗಿದೆ ಎಂದು ಹೊಗಳಲ್ಪಟ್ಟಿದೆ. ಇನ್ನೂ ಹೆಚ್ಚಿನ ಉದ್ಯಮಿಗಳು ಈ ಬದಲಾದ ಕಾನೂನಿನಡಿ ಸಾಲ ಮರುಪಾವತಿ ಮಾಡಬೇಕಿದೆ. ಇಲ್ಲವಾದರೆ ಅವರ ಆಸ್ತಿಯು ಮಾರಾಟವಾಗಲಿದೆ.
ತಿದ್ದುಪಡಿ ಮಾಡಲಾದ ಹೊಸ Insolvency and Bankruptcy Code ನ ಪರಿಣಾಮವಾಗಿ ದಿವಾಳಿ ಎಂದು ಘೋಷಿಸಲ್ಪಟ್ಟಿದ್ದ ಭೂಷಣ್ ಸ್ಟೀಲ್ ಸಂಸ್ಥೆಯು ಇತ್ತೀಚೆಗೆ ಟಾಟಾ ಸ್ಟೀಲ್ ಕಂಪೆನಿಗೆ ಮಾರಾಟವಾಗಿ 36400 ಕೋಟಿ ರುಪಾಯಿಗಳ ಬ್ಯಾಂಕ್ ಸಾಲವು ಮರುಪಾವತಿಗೊಂಡಿವೆ. ಶೀಘ್ರದಲ್ಲೇ ಇದೇರೀತಿ ದಿವಾಳಿ ಎಂದು ಘೋಷಿಸಲ್ಪಟ್ಟ ಉದ್ಯಮಗಳಿಂದ ಒಂದು ಲಕ್ಷ ಕೋಟಿ ರುಪಾಯಿಗೂ ಮಿಗಿಲಾದ ಮೊತ್ತದ ಸಾಲವು ಮರುಪಾವತಿಯಾಗಲಿದೆ ಎಂದು ಕೇಂದ್ರ ವಿತ್ತ ಸಚಿವಾಲಯವು ವಿಶ್ವಾಸವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.