ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಗಗನಕ್ಕೇರುತ್ತಿದೆ, ಈ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯಲ್ಲಿ ಭಾರೀ ಏರಿಕೆಯಾಗುತ್ತಿದೆ.
ಅಧಿಕೃತ ದಾಖಲೆಯ ಪ್ರಕಾರ ಭಾರತದಲ್ಲಿನ ಶೇ.60ರಷ್ಟು ಸಾರಿಗೆ ಸಾರ್ವಜನಿಕ ಸಾರಿಗೆಯಾಗಿದೆ, ಇದರಲ್ಲಿ ಶೇ.90ರಷ್ಟು ಬಸ್ಗಳೇ ಇವೆ. ಸುಮಾರು ಮೂರನೇ ಎರಡರಷ್ಟು ಮೋಟಾರು ಸಾರಿಗೆ ಮಾಲೀಕರಲ್ಲದವರು ಬಳಸುತ್ತಿದ್ದಾರೆ. ಸಾವಿರಗಟ್ಟಲೆ ಬಸ್ಗಳು ದೇಶದಲ್ಲಿ ಕಾರ್ಯಾಚರಿಸುತ್ತಿವೆ.
ಪ್ರಸ್ತುತ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಿರುವ ಹಿನ್ನಲೆಯಲ್ಲಿ ಮೋಟಾರು ವಾಹನ ಉತ್ಪಾದಕ ಕಂಪನಿಗಳು ಎಲೆಕ್ಟ್ರಿಕ್ ವಾಹನ ಉತ್ಪಾದನೆಯತ್ತ ಮುಖ ಮಾಡುತ್ತಿವೆ, ಜನರಿಂದಲೂ ಇದಕ್ಕೆ ಬೇಡಿಕೆಯಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಮೋಟಾರ್ಸ್ ವಕ್ತಾರ, ಎಲೆಕ್ಟ್ರಿಕ್ ಬಸ್ ಉತ್ಪಾದನೆಯತ್ತ ಗಮನವಹಿಸಿದ್ದೇವೆ. ಇದರ ಉದ್ಘಾಟನೆಗೆ ಅಧಿಕೃತ ದಿನಾಂಕ ನಿಗದಿಪಡಿಸಬೇಕಷ್ಟೇ. ಡೀಸೆಲ್, ಪೆಟ್ರೋಲ್ ವಾಹನಗಳಿಗೆ ಇದು ಪರ್ಯಾಯವಾಗಬಲ್ಲದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.