ಬೆಂಗಳೂರು: ತ್ಯಾಜ್ಯ ನಿರ್ವಹಣೆ ನಗರವಾಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಸಮಸ್ಯೆ. ಅದರಲ್ಲೂ ಬೆಂಗಳೂರು ಗಾರ್ಡನ್ ಸಿಟಿಯ ಬದಲಿಗೆ ಇತ್ತೀಚಿಗೆ ಗಾರ್ಬೇಜ್ ಸಿಟಿಯೆಂದೇ ಕರೆಯಲ್ಪಡುತ್ತಿದೆ. ಈ ನಡುವೆ ಕಲ್ಯಾಣ್ ನಗರದಲ್ಲಿನ ಶ್ರೀ ಶಕ್ತಿ ಕಲ್ಯಾಣ ಮಹಾಗಣಪತಿ ದೇಗುಲ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಎಲ್ಲರಿಗೂ ಮಾದರಿ ಎನಿಸಿದೆ.
ಪ್ರತಿನಿತ್ಯ ಈ ದೇಗುಲಕ್ಕೆ 500 ಮಂದಿ ಭಕ್ತಾದಿಗಳು ಆಗಮಿಸುತ್ತಾರೆ. ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಈ ದೇಗುಲ ಕಸ ವಿಂಗಡನೆಯನ್ನು ಅಚ್ಚುಕಟ್ಟಾಗಿ ನಡೆಸುತ್ತಿದೆ. ಒಣ ಕಸಗಳನ್ನು ಮಹಾನಗರ ಪಾಲಿಕೆಗೆ ನೀಡುವ ಈ ದೇಗುಲ ಹಸಿ ಕಸಗಳನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸುತ್ತದೆ.
ಎಲ್ಲಕ್ಕಿಂತಲೂ ಹೆಚ್ಚಾಗಿ ಇಲ್ಲಿಗೆ ಬರುವ ಭಕ್ತಾದಿಗಳು ಪ್ರಸಾದ ಪಡೆಯಲು ತಾವೇ ಚೀಲಗಳನ್ನು ಅಥವಾ ಕಪ್ಗಳನ್ನು ತರಬೇಕು. ದೇವಸ್ಥಾನದ ವತಿಯಿಂದ ಬಳಸಿ ಬಿಸಾಕುವಂತಹ ಪ್ಲೇಟ್, ಚೀಲ, ಲೋಟ ಅಥವಾ ಇನ್ನಿತರ ಯಾವುದೇ ವಸ್ತುಗಳನ್ನು ನೀಡಲಾಗುತ್ತಿಲ್ಲ. ಅನ್ನ ಸಂತರ್ಪಣೆಯನ್ನು ಸ್ಟೀಲ್ ಬಟ್ಟಲಿನಲ್ಲಿ ಮಾಡುತ್ತದೆ. ಇಲ್ಲಿಗೆ ಬರುವ ಭಕ್ತರು ಸ್ಟೀಲ್ ಬುತ್ತಿಗಳನ್ನು ಪ್ರಸಾದ ತೆಗೆದುಕೊಂಡು ತರುವುದನ್ನು ನಾವು ನೋಡಬಹುದು.
ತ್ಯಾಜ್ಯ ನಿರ್ವಹಣೆಯನ್ನು ಇಷ್ಟು ಕಟ್ಟುನಿಟ್ಟಾಗಿ ಎಲ್ಲಾ ಕಡೆಯೂ ಪಾಲಿಸಿದರೆ ಸ್ವಚ್ಛ ಭಾರತದ ಕನಸು ಸಾಕಾರವಾಗುವುದರಲ್ಲಿ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.