ನರೇಂದ್ರ ಮೋದಿಯವರು ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಒಂದು ಕೋಟಿಗೂ ಅಧಿಕ ಮತದಾರರನ್ನು ನೇರವಾಗಿ ತಲುಪಿದ್ದಾರೆ. ಮೋದಿ ಮೇ ತಿಂಗಳ 1 ತಾರೀಕಿನ ನಂತರ ಇಡೀ ಕರ್ನಾಟಕವನ್ನು ಸುತ್ತು ಹಾಕಿ 21 ರ್ಯಾಲಿಗಳನ್ನು ನಡೆಸಿ ಭಾರೀ ಸಂಚಲನವನ್ನೇ ಉಂಟುಮಾಡಿದ್ದಾರೆ. ಮೋದಿಯ ಪ್ರತೀ ರ್ಯಾಲಿಗೂ 1.5 ಯಿಂದ 2.5 ಲಕ್ಷದ ವರೆಗೆ ಜನರು ಸೇರುತ್ತಿದ್ದರು. ಮೋದಿ ತಮ್ಮ 21 ಬೃಹತ್ ರ್ಯಾಲಿಗಳ ಮೂಲಕ 50 ಲಕ್ಷಕ್ಕೂ ಹೆಚ್ಚು ಮತದಾರರನ್ನು ನೇರವಾಗಿಯೇ ತಲುಪಿದ್ದಾರೆ. ಅಷ್ಟೇ ಸಂಖ್ಯೆಯ ಜನರು ಮನೆಗಳಲ್ಲಿ ಕುಳಿತು ಟಿ ವಿ ಯಲ್ಲಿ, ಫೇಸ್ ಬುಕ್ ನಲ್ಲಿ ಅಥವಾ ನಮೋ ಆ್ಯಪ್ನ ನಮೋ ಟೀವಿಯಲ್ಲಿ ಮೋದಿಯ ಭಾಷಣದ ನೇರ ಪ್ರಸಾರವನ್ನು ನೋಡಿದ್ದಾರೆ.
ಇನ್ನು ಬಿಜೆಪಿ ಐಟಿ ವಿಭಾಗದ ಪ್ರಮುಖರಾದ ಅಮಿತ್ ಮಾಲವೀಯರು ಹೇಳುವಂತೆ ನರೇಂದ್ರ ಮೋದಿಯವರು ನಮೋ ಆ್ಯಪ್ ಮೂಲಕ ಬಿಜೆಪಿಯ ಕಾರ್ಯಕರ್ತರು ಹಾಗೂ ಜನ ಪ್ರತಿನಿಧಿಗಳು, ಬಿಜೆಪಿ ಮಹಿಳಾ ಮೋರ್ಛಾ ಪ್ರತಿನಿಧಿಗಳು, ಬಿಜೆಪಿ ಯುವ ಮೋರ್ಚಾ ಪ್ರತಿನಿಧಿಗಳು, ಬಿಜೆಪಿಯ ಎಸ್ ಸಿ /ಎಸ್ ಎಸ್ಟಿ/ಒಬಿಸಿ/ಸ್ಲಂ ಮೋರ್ಚಾಗಳ ಪ್ರತಿನಿಧಿಗಳು, ಬಿಜೆಪಿ ಕಿಸಾನ್ ಮೋರ್ಚಾ ಇವರುಗಳ ಜೊತೆ ಪ್ರತ್ಯೇಕ ಪ್ರತ್ಯೇಕವಾಗಿ ನಡೆಸಿದ ಆನ್ಲೈನ್ ವೀಡಿಯೋ ಸಂವಾದದ ಮೂಲಕ ಕರ್ನಾಟಕದ 25 ಲಕ್ಷಕ್ಕಿಂತಲೂ ಹೆಚ್ಚು ಜನ ಮತದಾರರನ್ನು ತಲುಪಿದ್ದಾರೆ.
ಬೃಹತ್ ಸಂಖ್ಯೆಯ ಮತದಾರರ ಜೊತೆಗೆ , ಕಾರ್ಯಕರ್ತರ ಜೊತೆಗೆ ಆನ್ಲೈನ್ ವೀಡಿಯೋ ಸಂವಾದವನ್ನು ನಡೆಸುತ್ತಿರುವ ವಿಶ್ವದ ಏಕೈಕ ನಾಯಕ ನರೇಂದ್ರ ಮೋದಿ. ಈ ಎಲ್ಲಾ ರೀತಿಯ ಮಾಧ್ಯಮಗಳ ಮೂಲಕ ಕೋಟಿಗೂ ಮೀರಿದ ಸಂಖ್ಯೆಯ ಮತದಾರರನ್ನು ಮೋದಿ ತಲುಪಿದ್ದಾರೆ. ಹೆಚ್ಚುಕಡಿಮೆ 20% ಮತದಾರರನ್ನು ಕೇವಲ 9 ದಿನಗಳಲ್ಲಿ ನೇರವಾಗಿ ತಲುಪಿದ ಮೋದಿ ಕರ್ನಾಟಕದಲ್ಲಿ ಬಿಜೆಪಿ ಅಲೆಯನ್ನು ಸೃಷ್ಟಿಸಿ, ಪಕ್ಷವನ್ನು ವಿಜಯದ ಎಡೆಗೆ ಕೊಂಡೊಯ್ದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.