ಪುತ್ತೂರು: ಮೊಟ್ಟೆತ್ತಡ್ಕದಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯವು ಗಿರಿಜನ ಅಭಿವೃದ್ಧಿ ಉಪಯೋಗದಡಿಯಲ್ಲಿ ಒಂದು ದಿನದ ’ಗೇರು ಬೆಳೆಯಲ್ಲಿ ಕೀಟ ನಿರ್ವಹಣಾ ಪ್ರಾತ್ಯಕ್ಷಿಕೆ’ ಯ ತರಬೇತಿ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಶ್ರೀಮತಿ ಸತ್ಯಭಾಮಾ ಅವರ ಗೇರು ತೋಟದಲ್ಲಿ ಮಾ.23ರಂದು ನಡೆಸಿತು. ಸುಮಾರು 35 ಗಿರಿಜನ ಪಂಗಡದ ಹಾಗೂ ಇತರ ಪ್ರಗತಿಪರ ಕೃಷಿಕರು ತರಬೇತಿಯನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾದ ಪ್ರೊ. ಪಿ. ಎಲ್. ಸರೋಜ್ ಗೇರು ಬೆಳೆಯಲ್ಲಿ ನೀರು, ಗೊಬ್ಬರ ಹಾಗೂ ತಳಿಗಳ ಮಹತ್ವವನ್ನು ತಿಳಿಸಿದರು. ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಗಂಗಾಧರ ನಾಯಕ್ ಗೇರು ಬೆಳೆಯಲ್ಲಿ ಸಾಂದ್ರ ಪದ್ಧತಿಯಲ್ಲಿ ತೋಟ ಬೆಳೆಸುವ ವಿಧಾನ ಹಾಗೂ ಗೆಲ್ಲು ಸವರುವ ಹಾಗೂ ನಿರ್ವಹಣೆ ಮಾಡುವುದನ್ನು ತಿಳಿಸಿಕೊಟ್ಟರು.
ಸಂಸ್ಥೆಯ ಇನ್ನೋರ್ವ ಪ್ರಧಾನ ವಿಜ್ಞಾನಿ ಡಾ. ಶಿವರಾಮ್ ಭಟ್ ಗೇರು ಬೆಳೆಯನ್ನು ಬಾಧಿಸುವ ಚಹಾ, ಸೊಳ್ಳೆ ಹಾಗೂ ಕಾಂಡ ಮತ್ತು ಬೇರು ಕೊರೆಯುವ ಕೀಟಗಳ ನಿರ್ವಹಣೆಯನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಸಂವಾದ ಕಾರ್ಯುಕ್ರಮದ ಬಳಿಕ ಕೃಷಿಕರಿಂದ ಸತ್ಯಭಾಮಾ ಅವರ ಗೇರು ತೋಟದ ವೀಕ್ಷಣೆ ನಡೆಯಿತು. ಅಲ್ಲಿ ಸಮರ್ಪಕ ಕೀಟನಾಶಕದ ಸಿಂಪಡಣೆಯ ಪ್ರಾತ್ಯಕ್ಷಿಕೆಯನ್ನು ತೋರಿಸಿಲಾಯಿತು. ಗೆಲ್ಲು ಸವರುವ ಹಾಗೂ ಗಿಡದ ಆಕಾರವನ್ನು ನಿರ್ವಹಿಸುವ ಬಗ್ಗೆ ಮಾಹಿತಿ ವಿನಿಮಯವೂ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.