Tuesday, 20th February 2018
×
Home About Us Advertise With s Contact Us

ರೋಟರಿಯಿಂದ ಗಿಡ ರಕ್ಷಕಗಳ ಕೊಡುಗೆ

ಬೆಳ್ತಂಗಡಿ: ಪರಿಸರ ಸಂವರ್ಧನೆಯಲ್ಲಿ ವನಮಹೋತ್ಸವದೊಂದಿಗೆ ಗಿಡಗಳ ಸಂರಕ್ಷಣೆ ಮಾಡುವುದು ಕೂಡಾ ಅತೀ ಅವಶ್ಯಕ. ಬೆಳ್ತಂಗಡಿ ರೋಟರಿ ಈ ಸಾಲಿನಲ್ಲಿ ಪರಿಸರ ಸಂವರ್ಧನಾ ಅಭಿಯಾನದಲ್ಲಿ ನೆಟ್ಟ ಗಿಡಗಳ ಸಂರಕ್ಷಣೆ ಹಾಗೂ ಜನಜಾಗೃತಿಗಾಗಿ ಗಿಡರಕ್ಷಗಳನ್ನು ನೀಡುವ ಕಾರ್ಯಕ್ರಮ ಕೈಕೊಂಡಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಡಾ.ಎ.ಜಯಕುಮಾರ ಶೆಟ್ಟಿ ಅವರು ತಿಳಿಸಿದರು.

Tree-Guards-Keddalike

ಅವರು ಈ ಸಾಲಿನಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೆದ್ದಳಿಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ತಂಗಡಿ ರೋಟರಿಯ ಪರವಾಗಿ ೨೦ ಗಿಡರಕ್ಷಕಗಳನ್ನು ಹಸ್ತಾಂತರಿಸುತ್ತಾ ಮಾತನಾಡುತ್ತಿದ್ದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ಶ್ರೀ ಕೆ.ರಮೇಶ್ ನಾಯಕ್ ಅವರು ಗಿಡರಕ್ಷಕಗಳ ಮಹತ್ವದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕಾರ್ಯದರ್ಶಿ ಎಂ.ವೈಕುಂಠ ಪ್ರಭು, ರೋಟರಿ ಆನ್ಸ್ ಕ್ಲಬ್‌ನ ಕಾರ್ಯದರ್ಶಿ ಶ್ರೀಮತಿ ನವೀನಾ ಜಯಕುಮಾರ್, ಸೆಲ್ಕೋ ಸಂಸ್ಥೆಯ ಸಂಜಿತ್ ರೈ, ಶಾಲಾ ಅಧ್ಯಾಪಕರಾದ ಸಹಸ್ರನಾಮ, ಚಂದಪ್ಪ ಪೂಜಾರಿ, ಲಿಲ್ಲಿ ಡಿಸೋಜಾ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top