×
Home About Us Advertise With s Contact Us

ಜಮ್ಮು ಕಾಶ್ಮೀರದಲ್ಲಿ ಭೀಕರ ಮಳೆ: ಪ್ರವಾಹ ಘೋಷಣೆ

jammuಶ್ರೀನಗರ: ಒಂದು ವರ್ಷದ ಹಿಂದೆ ಸಂಭವಿಸಿದ ಭೀಕರ ಪ್ರವಾಹದ ಕಹಿ ನೆನಪಿನಿಂದ ಇನ್ನೂ ಜಮ್ಮು ಕಾಶ್ಮೀರ ಹೊರ ಬಂದಿಲ್ಲ. ಇದೀಗ ಮತ್ತೆ ಅಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಭಾರೀ ಪ್ರಮಾಣದಲ್ಲಿ ಅಲ್ಲಿ ಮಳೆಯಾಗುತ್ತಿದ್ದು ಜೆಲುಂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಲ್ಲಲ್ಲಿ ಕೆಲ ಪ್ರದೇಶಗಳು ಜಲಾವೃತವಾಗಿದೆ.

ಭೂಕುಸಿತವೂ ಸಂಭವಿಸುತ್ತಿದ್ದು, ರಾಜ್ಯ ಸರ್ಕಾರ  ಪ್ರವಾಹ ಕಟ್ಟೆಚ್ಚರವನ್ನು ಘೋಷಿಸಿದೆ. ಈಗಾಗಲೇ 18 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದ್ದು, ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗುತ್ತಿದೆ. ರಕ್ಷಣ ಕಾರ್ಯ ಭರದಿಂದ ಸಾಗುತ್ತಿದೆ,

ಕಣಿವೆ ರಾಜ್ಯದ ಪರಿಸ್ಥಿತಿಯ ಅವಲೋಕನ ನಡೆಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ನೇತೃತ್ವದ ತಂಡವನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ನೂ ಒಂದು ವಾರಗಳ ಕಾಲ ಭೀಕರ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಈ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳನ್ನು ಎ.1ರವರೆಗೆ ಮುಚ್ಚಲು ಆದೇಶಿಸಲಾಗಿದೆ, ಸೇನೆ ಮುಂಜಾಗೃತ ಕ್ರಮವಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿದೆ.

2014ರ ಸೆಪ್ಟಂಬರ್‌ನಲ್ಲಿ ಸಂಭವಿಸಿದ ಪ್ರವಾಹಕ್ಕೆ ಜಮ್ಮು ಕಾಶ್ಮೀರದಲ್ಲಿ 300 ಮಂದಿ ಸಾವಿಗೀಡಾಗಿದ್ದರು, ಅಲ್ಲದೇ ಸಾವಿರಾರು ಮಂದಿ ಮನೆ ಮಠ ಕಳೆದು ಸಂತ್ರಸ್ಥರಾಗಿದ್ದರು. ಇದೀಗ ಅಂತಹುದೇ ಅನಾಹುತ ಮತ್ತೆ ಮರುಕಳಿಸದಂತೆ ಸರ್ಕಾರಗಳು ಕ್ರಮಕೈಗೊಳ್ಳಬೇಕಿದೆ

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top