Tuesday, 20th February 2018
×
Home About Us Advertise With s Contact Us

ಏಕಪಕ್ಷೀಯ ನಿರ್ಣಯಕ್ಕೆ ತಡೆ

inc_logoಕಾರ್ಕಳ: ಕಳೆದ ಫೆ.28ರಂದು ಕಾರ್ಕಳ ತಾಲೂಕು ಅಕ್ರಮ-ಸಕ್ರಮ ಸಮಿತಿಯ ಮೊತ್ತ ಮೊದಲ ಬೈಠಕ್‌ನಲ್ಲಿ ತೆಗೆದುಕೊಂಡ ಎಲ್ಲಾ ನಿರ್ಣಯಗಳನ್ನು ಉಡುಪಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ರದ್ದುಪಡಿಸಿ, ಎಲ್ಲಾ ಪ್ರಕರಣಗಳನ್ನು ಸಮಿತಿಗೆ ಮರು ಮಂಡಿಸುವಂತೆ ಉಡುಪಿ ಜಿಲ್ಲಾ ಅಪರ ಜಿಲ್ಲಾಕಾರಿ ಆದೇಶಿಸಿರುವುದನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸ್ವಾಗತಿಸಿದೆ.

ಕಾನೂನಿನ ದುರುಪಯೋಗದ ಮೂಲಕ ಸರಕಾರಿ ಸೌಲಭ್ಯಗಳ ದುರ್ಬಳಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಜಿಲ್ಲಾಧಿಕಾರಿಯವರು ದಿಟ್ಟ ಕ್ರಮ ತೆಗೆದುಕೊಂಡಿದ್ದಾರೆ. ಇದು ಅಕ್ರಮ-ಸಕ್ರಮ ಸಮಿತಿಯ ಸದಸ್ಯರಿಗೆ ಸಕಾಲಿಕವಾಗಿ ಸಮಿತಿ ಸಭೆಯ ನೋಟಿಸ್ ನೀಡದೆ ಮತ್ತು ಕಡತವನ್ನು ಪರಿಶೀಲಿಸಲು ಅವಕಾಶವನ್ನು ಕಲ್ಪಿಸದೆ.

ಸದಸ್ಯರೆಲ್ಲರ ಅನುಪಸ್ಥತಿಯಲ್ಲಿ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರು, ಕಾರ್ಯದರ್ಶಿಯಾಗಿರುವ ತಹಶೀಲ್ದಾರರ ಮೇಲೆ ಒತ್ತಡವನ್ನು ಹೇರಿ, ಇಬ್ಬರೇ ತೆಗೆದುಕೊಂಡ ನಿರ್ಣಯವಾಗಿತ್ತು. ಇದರಿಂದ ಅಕ್ರಮ-ಸಕ್ರಮ ಸಮಿತಿಯ ಕಾನೂನಾತ್ಮಕ ನೀತಿ ನಿಯಮಾವಳಿಯ ಉಲ್ಲಂಘನೆಯಾಗಿತ್ತು. ಸದ್ರಿ ದಿನದಂದು ಕೇವಲ 43 ಪ್ರಕರಣಗಳ ಕಡತಗಳನ್ನು ಮಾತ್ರ ಅಕ್ರಮ-ಸಕ್ರಮ ಸಮಿತಿಯ ಮುಂದೆ ಇಡಬೇಕಾಗಿತ್ತು.

ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತರ ಒತ್ತಡಕ್ಕೆ ಮಣಿದು ಸುಮಾರು 5 ಕೋಟಿ ರೂ. ಬೆಲೆಬಾಳುವ ಚಾರಾ ಗ್ರಾಮದ ಹಾಗೂ ಮತ್ತಿತರ ಗ್ರಾಮಗಳ ಭೂಮಿಯನ್ನು ಮಂಜೂರು ಮಾಡಲು ಅನಧಿಕೃತವಾಗಿ ಕಡತ ತಯಾರಿಸಿ ಹೆಚ್ಚುವರಿಯಾಗಿ ಸಮಿತಿಯ ಮುಂದೆ ಸೇರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಮಿತಿ ಸದಸ್ಯರು ಸಂಬಂಧಪಟ್ಟ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದರು. ಇದನ್ನು ನಿರ್ಲಕ್ಷಿಸಿ, ಉಡುಪಿ ಜಿಲ್ಲಾಧಿಕಾರಿಯವರು ಕ್ರಮ ಕೈಗೊಂಡಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top