ಧಾರವಾಡ: ದೇವ ಸೃಷ್ಟಿಯ ಈ ಸುಂದರ ಜಗತ್ತಿನಲ್ಲಿ ಹಕ್ಕಿಯ ಹಾಗೆ ಸ್ವಚ್ಛಂದವಾಗಿ ಬದುಕಬೇಕಾದ ಮನುಷ್ಯ ಯಾವುದೋ ವಿಚಾರದ ಸುಳಿಗೆ, ವಿನಾಶದ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೋಳಿಯ ತರಹ ಕತ್ತಲೆಯ ಭಾವ ಬಂಧನದಲ್ಲಿ ಜೀವಿಸುತ್ತಿದ್ದು, ಹೀಗಾಗಿ ಆಧ್ಯಾತ್ಮಿಕ ಸದ್ಭಾವ ಬೆಳಸಿಕೊಂಡು ಅದರಿಂದ ಮುಕ್ತನಾಗಬೇಕಿದೆ.
ನಿತ್ಯವೂ ವ್ಯಸನಗಳ ಜಗತ್ತಿನಲ್ಲಿ ಬದುಕುತ್ತಿರುವ ಮಾನವ ಅದರಿಂದ ಹೊರಬಂದು ನಿಸರ್ಗ ನಿರ್ಮಾಣದ ಈ ವಿಶಾಲ ಜಗತ್ತಿನಲ್ಲಿ ಸದ್ಭಾವ ಯೋಗ, ಸತ್ಯ ಹಾಗೂ ಪರಮ ಸ್ವಾತಂತ್ರ್ಯದಿಂದ ಜೀವಿಸಬೇಕು. ಸಮಾಜದಲ್ಲಿ ವೈಜ್ಞಾನಿಕ ಬೆಳವಣಿಗೆ ಹೆಚ್ಚಿದಂತೆ ಕಾಮ, ಆಸೆ, ಸಂಗ್ರಹ ಮನೋಭಾವಕ್ಕೆ ಒಳಗಾಗುತ್ತಿರುವುದು ಸರಿಯಲ್ಲ.
ಕಾಮ ತೃಪ್ತಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಾಮ ತೃಪಿ ಭಾವದಿಂದ ದೂರವಿರಬೇಕು. ಜಗತ್ತಿನಲ್ಲಿ ಸೃಜನ ಸೃಷ್ಠಿಯಿಂದ ಅನೇಕ ವಿಷ್ಮಯ ವಸ್ತುಗಳ ಜೀವ ಜೋತಿ ನಿರ್ಮಾಣ ಕಾರ್ಯ ಮತ್ತು ಸಮ್ಮಾರ್ಜನ(ರುದ್ರನೋಗರ, ತೆಗೆದಾಕುವ) ಕ್ರಿಯೆ ನಿರಂತರವಾಗಿ ನಡೆದಿದೆ. ಇದುವೇ ನಿಜವಾದ ಬ್ರಹ್ಮ ನಿರ್ಮಾಣ ಹಾಗೂ ದೇವ ಪೂಜೆಯಾಗಿದೆ.
ಇಡಿ ಜಗತ್ತೇ ದೇವರ ಪೂಜಾ ಸ್ಥಾನವಾಗಿದ್ದು, ಮನಾವ ಬರಿ ಇದನ್ನು ಪೂಜಿಸುವ ಬದಲಾಗಿ ಮುಕ್ತ ಮನಸ್ಸಿನಿಂದ ನೋಡುವ ಮನಸ್ಥಿತಿಯ ಅಗತ್ಯವಿದೆ. ಈಚೇಗೆ ದೇವ ಸೃಷ್ಠಿಯ ಈ ಅದ್ಭುತ ಜಗತ್ತಿನ ಸೌಂದರ್ಯ ಮತ್ತು ವೈಭವ ನೋಡಿ ಅನುಭವಿಸಲು ಮನುಷ್ಯರಿಗೆ ಸಮಯ ಇಲ್ಲದಾಗಿದೆ. ಕೇವಲ ಸ್ವಾರ್ಥದ ಬದಕಲ್ಲೇ ಜೀವನ ಕಳೆಯುತ್ತಾನೆ.
ಆಧ್ಯಾತ್ಮಿಕ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಸ್ವಾತಂತ್ರ್ಯ ಮತ್ತು ಸದ್ಭಾವ ಯೋಗದ ಜೀವನ ನಡೆಸುವ ಅವಶ್ಯಕತೆಯಿದೆ. ಸಮಾಜದಲ್ಲಿ ಈ ಜೀವ ಜ್ಯೋತಿ ಉರಿಯುವುದೇ(ಜೀವಂತ ಇರುವುದು) ಮಹತ್ವದ ಸಂಗತಿ. ಆದ್ದರಿಂದ ಮಾನವ ಕಷ್ಟ-ಸುಖ, ಸಿರಿತನ-ಬಡತನದ ಜತೆಗೆ ತೃಪ್ತಿಯ ಜೀವನ ನಡೆಸುವ ಮೂಲಕ ಬದುಕಿನ ದೀಪಕ್ಕೆ ಸ್ವಲ್ಪ ಎಣ್ಣೆ ಹಾಕುವುದು ಮುಖ್ಯ.
ಮಾನಸಿಕ ಆನಂದಕ್ಕಾಗಿ ಬದುಕುವುದೇ ಪರಮೋದ್ದೇಶ. ಪರರಿಗೂ ಆನಂದ ಬಯಸುವುದೇ ಸಾಧನೆ. ಮನುಷ್ಯನ ಹೊಟ್ಟಿ ತುಂಬಿಸಬಹುದು. ಆದರೆ, ಮಾನಸಿ(ಆಸೆ) ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಸಂಪಾದನೆ ಗುರಿ ಆಗಬಾರದು. ಜ್ಞಾನದ ದೀಪ, ಆನಂದದ ಪ್ರಕಾಶ ಜೀವನದ ಕೊನೆಯಲ್ಲಿ ಖುಷಿ ಕೊಡುತ್ತವೆ. ಆದರ್ಶ ಜೀವನದ ತತ್ವಾದರ್ಶ ರೂಢಿಸಿಕೊಳ್ಳಬೇಕು.
ದೇವ ಸೃಷ್ಟಿಯ ನೈಸರ್ಗಿಕ ಈ ಜಗತ್ತಿನಲ್ಲಿ ಕಷ್ಟಗಳ ಮಧ್ಯೆಯೂ ನಗು ನಗುತ್ತ ಸುಂದರವಾಗಿ ಬದುಕುವುದನ್ನು ಸತ್ ಮತ್ತು ಸದ್ಭಾವ ಯೋಗದ ಮೂಲಕ ಪ್ರತಿಯೊಬ್ಬರೂ ಕಲಿಯಬೇಕಿದೆ.