Wednesday, 21st February 2018
×
Home About Us Advertise With s Contact Us

ಸಾಗರ್‌ಮಾಲಾ ಅಭಿವೃದ್ಧಿ ಕಂಪೆನಿ ಉದ್ಘಾಟಿಸಿದ ನಿತಿನ್ ಗಡ್ಕರಿ

gadkari
ನವದೆಹಲಿ: ಸಾಗರ್‌ಮಾಲಾ ಅಭಿವೃದ್ಧಿ ಕಂಪೆನಿ ಉದ್ಘಾಟಿಸಿದ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಈ ಕಂಪೆನಿ ಭಾರತದ ಜಲ ಸಾರಿಗೆ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸುಮಾರು 1 ಲಕ್ಷ ಕೋಟಿ ರೂ. ಸಾಗರ್‌ಮಾಲಾ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿ ಕಾರ್ಯಗಳು ವಿವಿಧ ಹಂತಗಳಿಗೆ ತಲುಪಿದೆ ಎಂದು ಹೇಳಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ವೇಳೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಗಡ್ಕರಿ ಅವರು, ಸಾಗರ್‌ಮಾಲಾ ಯೋಜನಯಡಿ ಬಂದರು ನೇತೃತ್ವದ ಅಭಿವೃದ್ಧಿ ಯೋಜನೆಗಳನ್ನು ಗುರುತಿಸುವುದು ಹಾಗೂ ಬಂದರುಗಳು, ರಾಜ್ಯ ಮತ್ತು ಕೇಂದ್ರ ಸಚಿವಾಲಯಗಳ ವಿಶೇಷ ಉದ್ದೇಶಿತ ವಾಹನಗಳ (ಎಸ್‌ಪಿವಿ) ಯೋಜನೆಗೆ ನೀತಿ ರೂಪಿಸುವುದು ಕಂಪೆಯ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ಯಾವುದೇ ಮಾದರಿಯಲ್ಲಿ ನಿಧಿ ಒದಗಿಸಲು ಸಾಧ್ಯವಾಗದ ಬಾಕಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಸಾಗರ್‌ಮಾಲಾ ಅಭಿವೃದ್ಧಿ ಕಂಪೆನಿ (ಎಸ್‌ಡಿಸಿ)ಯನ್ನು 2013ರ ಕಂಪೆನಿ ಕಾಯಿದೆಗಳ ಅಡಿಯಲ್ಲಿ ಏಕೀಕೃತಗೊಳಿಸಲಾಗಿದೆ.

ಕೇಂದ್ರ ಸಚಿವ ಸಂಪುಟ ಜುಲೈ 2016ರಲ್ಲಿ ಜಲ ಸಾರಿಗೆ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಎಸ್‌ಡಿಸಿ ರಚನೆಗೆ ಅನುಮೋದನೆ ನೀಡಿತ್ತು.

ಎಸ್‌ಡಿಸಿ ಏಕೀಕರಣವು ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಸಾಗರ್‌ಮಾಲಾ ಕಾರ್ಯಕ್ರಮದ ಭಾಗವಾಗಿದ್ದು, ಭಾರತದ 7,500 ಕಿ.ಮೀ. ಉದ್ದದ ಕರಾವಳಿ, 14,500 ಕಿ.ಮೀ. ಸಂಚಾರಯೋಗ್ಯ ಜಲಮಾರ್ಗ, ಹಾಗೂ ಪ್ರಮುಖ ಅಂತಾರಾಷ್ಟ್ರೀಯ ಕಡಲು ವ್ಯಾಪಾರ ಮಾರ್ಗಗಳ ಗುರುತಿಸುವಿಕೆಗೆ ಸಜ್ಜುಗೊಳಿಸುವ ಗುರಿ ಹೊಂದಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top