ವಾಷಿಂಗ್ಟನ್: ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲಿರುವ ಬರಾಕ್ ಒಬಾಮಾ ಅವರ ಅಡಿಯಲ್ಲಿ ಭಾರತ ಮತ್ತು ಅಮೇರಿಕಾದ ಸಂಬಂಧಗಳು ‘ಎಂದಿನಂತೆ ಬಲವಾಗಿದೆ’ ಮತ್ತು ಅಧ್ಯಕ್ಷ ಒಬಾಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಅವಧಿಯಲ್ಲಿ ಹಲವು ವಿಚಾರಗಳ ಕುರಿತು ನಿಕಟವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಭಾರತ ಮತ್ತು ಅಮೇರಿಕಾದ ಸಂಬಂಧಗಳು ಇದುವರೆಗೆ ಎಂದಿನಂತೆ ಬಲವಾಗಿದೆ ಎಂದು ಶ್ವೇತಭವನದ ಪತ್ರಿಕಾ ಉಪ ಕಾರ್ಯದರ್ಶಿ ಎರಿಕ್ ಶಲ್ಟ್ಜ್ ಹೇಳಿದ್ದಾರೆ.
ಅಧ್ಯಕ್ಷ ಒಬಾಮಾ ಅವರು ಪ್ರಧಾನಿ ಮೋದಿ ಜೊತೆ ರಾಷ್ಟ್ರೀಯ ಸುರಕ್ಷತೆ, ಹವಾಮಾನ ಬದಲಾವಣೆ, ವ್ಯಾಪಾರ, ವಾಣಿಜ್ಯ, ಜನರ ನಡುವಿನ ಸಂಬಂಧಗಳು ಮುಂತಾದ ಹಲವಾರು ವಿಚಾರಗಳಲ್ಲಿ ನಿಕಟವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾವು ಒಂದು ಸಮೃದ್ಧ ಇತಿಹಾಸ ಮತ್ತು ಮೌಲ್ಯಗಳ ಹಂಚಿಕೆ ಹೊಂದಿದ್ದೇವೆ ಎಂದು ಎರಿಕ್ ಶಲ್ಟ್ಜ್ ಹೇಳಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸಲು ಹಾಕಲಾದ ಕ್ರಮಗಳು ಮತ್ತು ದಾಖಲೆಗಳ ಬಗ್ಗೆ ಒಬಾಮಾ ಅವರಿಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.