2016ರ ಪ್ಯಾರಾಲಿಂಪಿಕ್ಸ್ ಪದಕ ವಿಜೇತರನ್ನು ಸನ್ಮಾನಿಸಿದ ಸಚಿನ್ ತೆಂಡುಲ್ಕರ್

Published on : October 04, 2016,
By :
Share on FacebookTweet about this on TwitterShare on Google+

sachin-tendulkar2
ಮುಂಬಯಿ: ರಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಾದ ಮರಿಯಪ್ಪನ್ ತಂಗವೇಲು, ದೇವೇಂದ್ರ ಜಝಾರಿಯಾ, ದೀಪಾ ಮಲಿಕ್ ಹಾಗೂ ವರುಣ್ ಸಿಂಗ್ ಭಾಟಿ ಅವರನ್ನು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಸೇರಿದಂತೆ ಇತರ ಗಣ್ಯ ಅಧಿಕಾರಿಗಳು ಸನ್ಮಾನಿಸಿದ್ದಾರೆ.

ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಪದಕ ಗೆದ್ದ ನಾಲ್ವರು ಕ್ರೀಡಾಪಟುಗಳಿಗೆ ತಲಾ 15 ಲಕ್ಷ ರೂ. ನಗದು ಬಹುಮಾನ ನೀಡಿ ಸನ್ಮಾಮಿಸಲಾಯಿತು. ಇದೇ ವೇಳೆ ಈ ಹಿಂದೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಗೆದ್ದ ಕ್ರೀಡಾಳುಗಳಿಗಳಿಗೂ 15 ಲಕ್ಷ ರೂ. ಬಹುಮಾನ ವಿತರಿಸಲಾಯಿತು.

ಪ್ಯಾರಾಲಿಂಪಿಕ್ಸ್ ಕ್ರಿಡಾಪಟುಗಳನ್ನು ರೂಪಿಸಿ, ಪ್ರೋತ್ಸಾಹಿಸಿ, ಅವರಿಗೆ ಬೆಂಬಲ ನೀಡುತ್ತಿರುವ ಗೋಸ್ಪೋರ್ಟ್ಸ್ ಪೌಂಡೇಶನ್‌ಗೂ ರೂ. 35 ಲಕ್ಷ ರೂ. ನೀಡಲಾಯಿತು.

 

Leave a Reply