ಮಾಸ್ಕೋ: ಭಾರತದ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು 9ನೇ ಮಾಸ್ಕೋ ಸ್ಕಲ್ಪಚರ್ ಚಾಂಪಿಯನ್ಶಿಪ್ ’ದಿ ಮ್ಯಾಜಿಕಲ್ ವರ್ಲ್ಡ್ ಆಫ್ ಸ್ಯಾಂಡ್’ 2016 ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
’ಮಹಾತ್ಮ ಗಾಂಧಿ-ವರ್ಲ್ಡ್ ಪೀಸ್’ ಎಂಬ ಥೀಮ್ ಇಟ್ಟುಕೊಂಡು ಇವರು ರಚಿಸಿದ್ದ ಮರಳು ಶಿಲ್ಪಕ್ಕೆ ಚಿನ್ನದ ಪದಕ ಬಂದಿದೆ.
ಎಪ್ರಿಲ್ 21-27ರವರೆಗೆ ಈ ಸ್ಪರ್ಧೆ ನಡೆದಿತ್ತು, ವಿವಿಧ ದೇಶಗಳ ಮರಳು ಶಿಲ್ಪಿಗಳು ಇದರಲ್ಲಿ ಭಾಗವಹಿಸಿದ್ದರು.
ಪಟ್ನಾಯಕ್ ಅವರ ಶಿಲ್ಪ 15 ಫೀಟ್ ಎತ್ತರವಿದ್ದು, ಅಹಿಂಸೆ ಮತ್ತು ಶಾಂತಿಯ ಸಂದೇಶವನ್ನು ಸಾರಿತ್ತು.
ಪಟ್ನಾಯಕ್ ಅವರು 50 ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. 2014ರಲ್ಲಿ ಇವರಿಗೆ ಪದ್ನಶ್ರಿ ಪ್ರಶಸ್ತಿ ಲಭಿಸಿದೆ. ಇವರು ಒರಿಸ್ಸಾದ ಪುರಿ ಬೀಚ್ನಲ್ಲಿ ಸ್ಯಾಂಡ್ ಆರ್ಟ್ ಸ್ಕೂಲ್ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.