×
Home About Us Advertise With s Contact Us

ಸೆಮಿಫೈನಲ್‌ಗೆ ನ್ಯೂಜಿಲ್ಯಾಂಡ್

newzವೆಲ್ಲಿಂಗ್‌ಟನ್: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ 4ನೇ ಕ್ವಾಟರ್‌ಫೈನಲ್‌ನಲ್ಲಿ ವೆಸ್ಟಿಮಡೀಸ್ ವಿರುದ್ಧ ಭರ್ಜರಿ ಜಯಸಾಧಿಸಿರುವ ನ್ಯೂಜಿಲ್ಯಾಂಡ್ ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಶನಿವಾರ ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಅತಿಥೇಯರು ವೆಸ್ಟ್‌ಇಂಡಿಸ್ ತಂಡವನ್ನು ಬರೋಬ್ಬರಿ 143 ರನ್‌ಗಳ ಮುಖಾಂತರ ಸೋಲಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಟ್ ಮಾರ್ಟಿನ್ ಗಫ್ಟಿಲ್ ಅವರ ಅಮೋಘ ದ್ವಿಶತಕದ ನೆರೆವಿನೊಂದಿಗೆ ಆರು ವಿಕೆಟ್ ನಷ್ಟಕ್ಕೆ ಬರೋಬ್ಬರಿ 394ರ್ ಬಾರಿಸಿತು.
ಈ ಅಸಾಧಾರಣ ಮೊತ್ತವನ್ನು ಬೆನ್ನತ್ತಿದ ವೆಸ್ಟ್‌ಇಂಡೀಸ್ 30.3 ಓವರ್‌ಗಳಲ್ಲಿ 250 ರನ್ ಪಡೆದು ಸರ್ವಪತನಗೊಂಡಿತು.

ಇಲ್ಲಿಗೆ ಕ್ವಾಟರ್‌ಫೈನಲ್ ಹಂತ ಮುಕ್ತಾಯವಾಗಿದ್ದು ಸೆಮಿಫೈನಲ್‌ಗೆ ಭಾರತ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಮತ್ತು ದಕ್ಷಣ ಆಫ್ರಿಕಾ ತಂಡಗಳು ಆರ್ಹತೆ ಪಡೆದಿವೆ.

ಮಾ.24ರಂದು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಕಾದಾಡಲಿದೆ. ಮಾ.26ರಂದು ಭಾರತ ಮತ್ತು ಆಸ್ಟ್ರೇಲಿಯಾ ಕಾದಾಡಲಿದೆ. ಫೈನಲ್ ಪಂದ್ಯ ಮಾ.29ರಂದು ನಡೆಯಲಿದೆ.

 

 

 

 

 

 

 

 

Recent News

Back To Top
error: Content is protected !!