Tuesday, 20th February 2018
×
Home About Us Advertise With s Contact Us

ಅಡಕೆ ಮಾರಾಟ ಮಾಡಿದ ಹಣ ಕಳವು : ಆರೋಪಿ ಬಂಧನ

ಕಾರ್ಕಳ : ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ವಾಹನದ ಡ್ಯಾಶ್ ಬೋರ್ಡ್‌ನಿಂದ 2 ಲಕ್ಷ ರೂ. ಹಣವನ್ನು ಕಳವುಗೈದ ಸಾಗರ ನಿವಾಸಿ ಪ್ರವೀಣ್ ಎಂ.ಕೆ(25) ಆರೋಪಿ ಯನ್ನು ನಗರ ಠಾಣೆಯ ಪೊಲೀಸರು ಬಂಸಿದ್ದಾರೆ.

19KV-CCB

ಕಳೆದ ಫೆ.10ರಂದು ಅಡಕೆ ವ್ಯಾಪಾರಿ ಅಬ್ದುಲ್ ಸಮದ್ 16 ಕ್ವಿಂಟಾಲ್ ಅಡಕೆಯನ್ನು ಸಾಗರದಿಂದ ಮಂಗಳೂರು ಪರಂಗಿಪೇಟೆಯ ಅಡಕೆ ಅಂಗಡಿಗೆ ಮಾರಾಟ ಮಾಡಿದ್ದ. ಅದರಿಂದ ಬಂದ 2 ಲಕ್ಷ ರೂ. ಹಣವನ್ನು ಬಾಡಿಗೆಗೆ ಗೊತ್ತುಮಾಡಿದ ಪಿಕಪ್ ವಾಹನದ ಡ್ಯಾಶ್ ಬೋರ್ಡಿನಲ್ಲಿಟ್ಟು ಊರಿಗೆ ವಾಪಾಸ್ಸಾಗಿದ್ದ. ಕಾರ್ಕಳ ಮಾರ್ಗವಾಗಿ ಸಾಗರಕ್ಕೆ ತೆರಳುತ್ತಿದ್ದ ವೇಳೆ ಮರ್ಣೆ ಗ್ರಾಮದ ಎಣ್ಣೆಹೊಳೆಯ ಬಳಿ ಪಿಕಫ್ ವಾಹನವನ್ನು ನಿಲ್ಲಿಸುವಂತೆ ಸೂಚಿಸಿ ಮೂತ್ರ ವಿಸರ್ಜನೆಗೆ ಇಳಿದಿದ್ದ.

ಆದರೆ ವಾಪಾಸು ಬಂದು ವಾಹನ ಹತ್ತಿ ನೋಡಿದಾಗ ಡ್ಯಾಸ್ ಬೋರ್ಡ್‌ನಲ್ಲಿದ್ದ ಹಣ ನಾಪತ್ತೆಯಾಗಿತ್ತು. ಈ ಸಂದರ್ಭ ವಾಹನದಲ್ಲಿದ್ದ ಚಾಲಕ ಸಲೀಂ ಮತ್ತು ಅಜೀಂ ಕಳವು ಮಾಡಿರಬಹುದು ಎಂದು ಶಂಕಿಸಿ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಈ ಹಿಂದೆ ವಾಹನದಲ್ಲಿ ಕ್ಲೀನರ್ ಆಗಿದ್ದ ಪ್ರವೀಣ್ ಎಂಬಾತನನ್ನು ಸಂಶಯದ ಮೇಲೆ ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಫೆ.10ರಂದು ಆರೋಪಿಯು ನಕಲಿ ಕೀ ಬಳಸಿ ಹಣ ಕದ್ದು ಪರಾರಿಯಾಗಿದ್ದ. ಆ ಸಂದರ್ಭ ತನ್ನ ಜತೆಯಲ್ಲಿದ್ದವರ ಮೇಲೆ ಸಂಶಯದಿಂದ ಕಾಣುವಂತಾಯಿತು.

ಉಡುಪಿ ಜಿಲ್ಲಾ ಎಸ್.ಪಿ.ಅಣ್ಣಾಮಲೈ ಆದೇಶದಂತೆ ಹೆಚ್ಚುವರಿ ಎಸ್.ಪಿ.ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಕಾರ್ಕಳ ಡಿವೈಎಸ್‌ಪಿ ವಿನಯ ಎಸ್.ನಾಯಕ್ ನಿರ್ದೇಶನದಂತೆ ಕಾರ್ಕಳ ವೃತ್ತ ನಿರೀಕ್ಷಕ ಜಿ.ಎಂ.ನಾಯ್ಕರ್, ಸಿಬ್ಬಂದಿ ಎಚ್.ಸಿ.ರಾಜೇಶ್ ಪಿ., ಏಕನಾಥ್, ಪಿ.ಸಿ.ಸಂಜಯ್, ಅರುಣ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಸಿ ಕಳವು ಮಾಡಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top