×
Home About Us Advertise With s Contact Us

ಬಿಜೆಪಿ ಹೆಸರಲ್ಲಿ ಕೇಜ್ರಿವಾಲ್‌ರಿಂದ ಫೇಕ್ ಕಾಲ್: ಗಾರ್ಗ್ ಆರೋಪ

gargನವದೆಹಲಿ: ಅರವಿಂದ್ ಕೇಜ್ರಿವಾಲ್ ಅವರ ಸಮ್ಮತಿಯೊಂದಿಗೆ ನನಗೆ ಮತ್ತು ಇತರ ಕೆಲವು ನಾಯಕರುಗಳಿಗೆ ಬಿಜೆಪಿಗೆ ಬೆಂಬಲ ನೀಡುವಂತೆ ಫೇಕ್ ದೂರವಾಣಿ ಕರೆಗಳನ್ನು ಮಾಡಲಾಗುತ್ತಿತ್ತು, ಈ ಮೂಲಕ ಬಿಜೆಪಿಗೆ ಅವಮಾನ ಮಾಡುವ ಪ್ರಯತ್ನ ನಡೆಯುತ್ತಿತ್ತು ಎಂದು ಎಎಪಿಯ ಉಚ್ಛಾಟಿತ ಸದಸ್ಯ ಹಾಗೂ ಮಾಜಿ ಶಾಸಕ ರಾಜೇಶ್ ಗಾರ್ಗ್ ಗಂಭೀರ ಆರೋಪ ಮಾಡಿದ್ದಾರೆ.

ವಿತ್ತ ಸಚಿವ ಅರುಣ್ ಜೇಟ್ಲಿಯವರ ಕಛೇರಿಯಿಂದ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ನನಗೆ ಪೇಕ್ ದೂರವಾಣಿ ಕರೆ ಮಾಡಿದ್ದ, ಬಿಜೆಪಿಗೆ ಸೇರಿ 10 ಕೋಟಿ ಹಣ ಕೊಡುತ್ತೇವೆ ಎಂದಿದ್ದ. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದೆ. ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದರು. ಆದರೆ ಬಳಿಕ ವ್ಯಕ್ತಿಯ ವಿರುದ್ಧ ದೂರನ್ನು ವಾಪಸ್ ಪಡೆಯಿರಿ ಎಂದು ಎಎಪಿಯ ಸಂಜಯ್ ಸಿಂಗ್ ನನಗೆ ಒತ್ತಡ ಹೇರಿದ್ದರು. ನಾನು ಅವರ ಮಾತನ್ನು ಕೇಳಲಿಲ್ಲ. ಬಳಿಕ ಎಎಪಿಯ ಮಧ್ಯಪ್ರವೇಶದಿಂದಾಗಿ ಆ ವ್ಯಕ್ತಿಯನ್ನು ಪೊಲೀಸರು ಬಿಡುಗಡೆ ಮಾಡಿದರು ಎಂದು ಗಾರ್ಗ್ ಹೇಳಿದ್ದಾರೆ.

ಈ ರೀತಿ ಬಿಜೆಪಿ ನಾಯಕರುಗಳಾದ ಅರುಣ್ ಜೇಟ್ಲಿ ಮತ್ತು ನಿತಿನ್ ಗಡ್ಕರಿಯ ಕಛೇರಿಯಿಂದ ಎಂದು ಹೇಳಿಕೊಂಡು ಹಲವಾರು ಫೇಕ್ ಕಾಲ್‌ಗಳು ನಮಗೆ ಬಂದಿವೆ ಎಂದು ನನ್ನಂತೆ ಹಲವಾರು ಎಎಪಿಯ ಮಾಜಿ ಶಾಸಕರುಗಳು ಹೇಳಿಕೊಂಡಿದ್ದಾರೆ.

ಆದರೆ ಈ ರೀತಿಯ ಫೇಕ್ ಕಾಲ್ ಗಳನ್ನು ಅರವಿಂದ್ ಕೇಜ್ರಿವಾಲ್ ಅವರ ಸಮ್ಮತಿಯೊಂದಿಗೆ ಅನಾಮಧೇಯ ವ್ಯಕ್ತಿಗಳು ಮಾಡುತ್ತಿದ್ದರು. ಬಿಜೆಪಿಯನ್ನು ಅವಮಾನಗೊಳಿಸುವುದಕ್ಕಾಗಿ ಈ ರೀತಿ ಮಾಡಲಾಗುತ್ತಿತ್ತು ಎಂದು ಗಾರ್ಗ್ ಆರೋಪಿಸಿದ್ದಾರೆ.

 

 

 

 

 

 

 

 

Recent News

Back To Top
error: Content is protected !!