ಲಕ್ನೋ: ಉತ್ತರಪ್ರದೇಶದ ಮಾಜಿ ಸಿಎಂಗಳಾದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಸಿಂಗ್ ಯಾದವ್ ಕೊನೆಗೂ ಸುಪ್ರೀಂಕೋಟ್ ಆದೇಶಕ್ಕೆ ತಲೆಬಾಗಿ ತಮ್ಮ ಸರ್ಕಾರಿ ಬಂಗಲೆಯನ್ನು ಹಿಂದಿರುಗಿಸಿದ್ದಾರೆ.
ಉತ್ತರಪ್ರದೇಶದ ಎಲ್ಲಾ ಸಿಎಂಗಳು ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಸುಪ್ರೀಂ ಸೂಚಿಸಿತ್ತು. ಇದಕ್ಕೆ ಮಾಯಾವತಿ ಸೇರಿದಂತೆ ಅಖಿಲೇಶ್, ಮುಲಾಯಂ ವಿರೋಧ ವ್ಯಕ್ತಪಡಿಸಿದ್ದರು. ಆದೇಶ ಹಿಂಪಡೆಯುವಂತೆ ಮನವಿ ಮಾಡಿದ್ದರು. ಅಲ್ಲದೇ ಎರಡು ವರ್ಷಗಳ ಕಾಲಾವಕಾಶವನ್ನೂ ಕೇಳಿದ್ದರು. ಆದರೆ ಯಾವುದೂ ಪ್ರಯೋಜನವಾಗಿಲ್ಲ.
ಯೋಗಿ ಆದಿತ್ಯನಾಥ ಸರ್ಕಾರ ಕೂಡ ಸುಪ್ರೀಂ ಆದೇಶದಂತೆ ಬಂಗಲೆ ಖಾಲಿ ಮಾಡಲು ಇವರ ಮೇಲೆ ಒತ್ತಡವನ್ನು ತಂದಿತ್ತು. ಕೊನೆಗೂ ಒತ್ತಡಕ್ಕೆ ಮಣಿದು ಬಂಗಲೆಯನ್ನು ವಾಪಾಸ್ ಮಾಡಿದ್ದಾರೆ. ಮಾಯಾವತಿಯವರತೂ ಬಂಗಲೆಯ ಕೀಯನ್ನು ಸರ್ಕಾರಕ್ಕೆ ನೀಡಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.