ಶ್ರೀಹರಿಕೋಟ: ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಮುಂಜಾನೆ ಐಆರ್ಎನ್ಎಸ್ಎಸ್-1ಐ ನೇವಿಗೇಶನ್ ಸೆಟ್ಲೈಟ್ನ್ನು ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆಗೊಳಿಸಿದೆ.
ಆಂಧ್ರದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳ್ಳಗ್ಗೆ 4.04ರ ಸುಮಾರಿಗೆ ಸೆಟ್ಲೈಟ್ನ್ನು ಪಿಎಸ್ಎಲ್ವಿ-ಸಿ41 ರಾಕೆಟ್ ಮೂಲಕ ಉಡಾವಣೆಗೊಳಿಸಲಾಯಿತು.
ನೇವಿಗೇಶನ್ ಸೆಟ್ಲೈಟ್ ಐಆರ್ಎನ್ಎಸ್ಎಸ್-1ಐನ್ನು ಪಿಎಸ್ಎಲ್ವಿ-ಸಿ41 ಮೂಲಕ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ ಎಂದು ಇಸ್ರೋ ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದೆ.
ಇದುವರೆಗೆ ಉಡಾವಣೆಗೊಳಿಸಲಾದ ಏಳು ಐಆರ್ಎನ್ಎಸ್ಎಸ್-1ಐ ಸೆಟ್ಲೈಟ್ಗಳಲ್ಲಿ ಇದು ಮೊದಲನೇಯದ್ದು. ಮೊದಲ ಉಪಗ್ರಹ ವಿಫಲವಾದ ಹಿನ್ನಲೆಯಲ್ಲಿ ಪರ್ಯಾಯವಾಗಿ ಎರಡನೇಯ ಪ್ರಯತ್ನವಾಗಿ ಇದನ್ನು ಉಡಾವಣೆಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.