ಅಡ್ಯಾರಿನಲ್ಲಿ ಸ್ಕಿಲ್ ಇಂಡಿಯಾ – ಉದ್ಯೋಗ ಮತ್ತು ಕೌಶಲ್ಯ ತರಬೇತಿ ಶಿಬಿರ
ಜನಸಂಖ್ಯೆ ಬೆಳೆದಿದೆ, ಉದ್ಯೋಗಾವಕಾಶಗಳಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಹೀಗಾಗಿ ಯುವಜನತೆಗೆ, ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉದ್ಯೋಗ ಹಾಗೂ ಉಚಿತ ತರಬೇತಿಯ ಯೋಜನೆಯನ್ನು ಕೇಂದ್ರ ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕರಾವಳಿ ಭಾಗದ ಯುವ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ಫೆಬ್ರವರಿ ೨೭ರಂದು ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಉದ್ಯೋಗ ಮತ್ತು ಕೌಶಲ್ಯ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ರಾಷ್ಟ್ರೀಯ ಯೋಜನೆ :
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಎನ್.ಎಸ್.ಡಿ.ಸಿ. ಸ್ಕಿಲ್ ಇಂಡಿಯಾ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿಯವರೇ ನುಡಿದಂತೆ ಶಿಕ್ಷಿತ ಯುವ ಸಮುದಾಯಕ್ಕೆ ನೌಕರಿ ಸಿಗಲು ಬೇಕಾದ ಕೌಶಲ್ಯದ ತರಬೇತಿ ನೀಡುವುದು ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುವುದು ಸ್ಕಿಲ್ ಇಂಡಿಯಾದ ಮೂಲಮಂತ್ರವಾಗಿದೆ. ಹೀಗಾಗಿ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (PMKVY)ಯು ಈ ಶಿಬಿರದ ಕನಸಿಗೆ ಮುಕ್ತ ಮಾರ್ಗ ಕಲ್ಪಿಸುತ್ತದೆ.
ಸಂಸದರ ವಿಶೇಷ ಆಸಕ್ತಿ:
ಯುವ ಜನತೆಗೆ ಪ್ರೇರಣೆ ನೀಡುವ ವ್ಯಕ್ತಿತ್ವ ಹೊಂದಿರುವ ಮಂಗಳೂರಿನ ಸಂಸದ ನಳಿನ್‌ಕುಮಾರ್ ಕಟೀಲ್ ತಾನು ಪ್ರತಿನಿಧಿಸುವ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಯುವಜನತೆ ಮತ್ತು ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳು, ಬಹುಮುಖ್ಯವಾಗಿ ಎಲ್ಲಾ ಸಮುದಾಯದವರು ಇದರ ಪ್ರಯೋಜನ ಪಡೆಯಬೇಕೆಂಬ ಇಚ್ಛೆಯಿಂದ ಕಾಲೇಜುಗಳಿಗೆ ಸುತ್ತೋಲೆಗಳು, ಪತ್ರಿಕಾ ಮತ್ತು ಮಾಧ್ಯಮ ಪ್ರಕಟಣೆಗಳ ಮೂಲಕ ಸಾರ್ವಜನಿಕ ಮಾಹಿತಿ ನೀಡಿದ್ದಾರೆ. ಸುಮಾರು 100 ಕ್ಕೂ ಅಧಿಕ ಕಂಪೆನಿಗಳನ್ನು ಹಾಗೂ ಕರಾವಳಿ ಭಾಗದ ಸ್ಥಳೀಯ ಕಂಪನಿಗಳನ್ನು ಸೇರಿಸಿಕೊಂಡು ಶಿಬಿರಕ್ಕೆ ಬರುವ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಯೋಜನವಾಗಲೆಂದು ಪ್ರಯತ್ನಿಸುತ್ತಿದ್ದಾರೆ.
ತರಬೇತಿಯ ಸ್ವರೂಪ ವೈಶಿಷ್ಟ್ಯ:
ಸಾಫ್ಟ್‌ವೇರ್‌ನಿಂದ ತೊಡಗಿ ಯಾವುದೇ ರೀತಿಯ ಉದ್ಯೋಗಾಕಾಂಕ್ಷಿಗಳಿಗೆ ಈ ಶಿಬಿರ ಹೆಬ್ಬಾಗಿಲು ತೆರೆಯಲಿದೆ. ಆಧುನಿಕ ಅವಶ್ಯಕತೆಗನುಗುಣವಾಗಿ ಸಂದರ್ಶನಗಳನ್ನು ಎದುರಿಸುವ, ಕೌಶಲ್ಯ ವರ್ಧಿಸಿಕೊಳ್ಳುವ `ಟಿಪ್ಸ್’ ಮತ್ತು ಮಾರ್ಗದರ್ಶನವನ್ನು ಶಿಬಿರ ನೀಡಲಿದೆ. ನೋಂದಣಿ ಮತ್ತು ಫಾಲೋಅಪ್‌ಗಳ ಮೂಲಕವೂ ಸಹಕರಿಸಲಿದೆ. ಈ ಉದ್ಯೋಗ ಮೇಳದ ವಿಶೇಷತೆಯೆಂದರೆ ಆಯ್ಕೆಯಾಗದ ಅಭ್ಯರ್ಥಿಗಳಿಗೂ ವಿಶೇಷ ತರಬೇತಿ ನೀಡಿ ಉದ್ಯೋಗ ಪಡೆಯುವಂತೆ ಮಾಡುವುದು.
ಇದಕ್ಕಾಗಿಯೇ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಪೋರೇಶನ್‌ನ ಅಧಿಕೃತ ತರಬೇತಿ ಪಾಲುದಾರರಾದ ರೂಮನ್ ಟೆಕ್ನಾಲಜೀಸ್ (Rooman Technologies) ಸಂಸ್ಥೆಯ ಸಹಭಾಗಿತ್ವ ಪಡೆದುಕೊಳ್ಳಲಾಗಿದೆ. ತಜ್ಞರು-ಸಂಪನ್ಮೂಲ ವ್ಯಕ್ತಿಗಳು ವಿಶೇಷ ಮಾರ್ಗದರ್ಶನ ನೀಡಲಿದ್ದಾರೆ.
ನೀವೇನು ಮಾಡಬಹುದು?
ನೀವೇ ಉದ್ಯೋಗಾಕಾಂಕ್ಷಿಗಳಾಗಿದ್ದಲ್ಲಿ ನೀವೇ ನೋಂದಣಿ ಮಾಡಿಕೊಳ್ಳಬಹುದು ಅಥವಾ ನಿಮ್ಮ ಸಂಪರ್ಕದ ಯಾರಿಗಾದರೂ ಸಹಾಯ ಮಾಡಬಹುದು. ಒಟ್ಟಿನಲ್ಲಿ ಈ ಶಿಬಿರದ ಭರಪೂರ ಲಾಭ ಪಡೆದುಕೊಂಡು, ಯುವಜನತೆ ದೇಶದ ಆರ್ಥಿಕತೆಯ ಬೆನ್ನುಲುಬು ಎಂಬುದನ್ನು ದೃಢಪಡಿಸಬಹುದು. ಜೀವನದಲ್ಲೂ ಯಶಸ್ಸು ಕಾಣಬಹುದು.
ನೋಂದಣಿಗಾಗಿ www.mlr.rooman.com, +91 8123169224, +91 9900075606