News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚಿತ್ರರಂಗದ ಬಡ ಕಾರ್ಮಿಕರಿಗೆ ಸರ್ಕಾರದಿಂದ 6.60 ಕೋಟಿ ರೂ ಸಹಾಯಧನ ಬಿಡುಗಡೆ

ಬೆಂಗಳೂರು: ಕೊರೋನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ನಲುಗಿದ್ದ ಚಿತ್ರರಂಗಕ್ಕೆ ರಾಜ್ಯ ಸರ್ಕಾರ 6.60 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡಿದೆ. ಕೊರೋನಾ ಲಾಕ್ಡೌನ್‌ನಿಂದಾಗಿ ಸಂಕಷ್ಟ‌ಕ್ಕೆ ತುತ್ತಾಗಿರುವ ಸಿನಿಮಾ, ಕಿರುತೆರೆಯ ಬಡ ಕಲಾವಿದರು, ತಂತ್ರಜ್ಞರಿಗೆ ಅನುಕೂಲ ಸೃಷ್ಟಿ‌ಸುವ, ನೆರವಾಗುವ ನಿಟ್ಟಿನಲ್ಲಿ ರಾಜ್ಯ...

Read More

30 ದಿನಗಳಲ್ಲಿ ಬೆಂಗಳೂರಿನ 30 ಲಕ್ಷ ಜನರಿಗೆ ಕೊರೋನಾ ಲಸಿಕೆ: ಬಿಬಿಎಂಪಿ

ಬೆಂಗಳೂರು: ಮುಂದಿನ 30 ದಿನಗಳಲ್ಲಿ ನಗರದಲ್ಲಿ‌ನ 30 ಲಕ್ಷ ಜನರಿಗೆ ಖಾಸಗಿ ಆಸ್ಪತ್ರೆಗಳು, ದಾನಿಗಳ ನೆರವಿನಿಂದ ಕೊರೋನಾ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಕೊರೋನಾ ಮೂರನೇ ಅಲೆ ಆರಂಭವಾಗುವುದಕ್ಕೂ ಮುನ್ನ ಅಗತ್ಯ ಇರುವ ಎಲ್ಲರಿಗೂ ಲಸಿಕೆ ಹಾಕುವ...

Read More

ಲಾಕ್ಡೌನ್ ಬಳಿಕ ಬಿಎಂಟಿಸಿ ಪ್ರಯಾಣ ದರ ಏರಿಕೆ ಇಲ್ಲ: ಲಕ್ಷ್ಮಣ್ ಸವದಿ

ಬೆಂಗಳೂರು: ಲಾಕ್ಡೌನ್ ಮುಗಿಯುತ್ತಿದ್ದಂತೆ ಬಿಎಂಟಿಸಿ ಪ್ರಯಾಣ ದರ ಹೆಚ್ಚಳವಾಗುತ್ತದೆ ಎಂಬ ಪ್ರಯಾಣಿಕರ ಆತಂಕವನ್ನು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ದೂರ ಮಾಡಿದ್ದಾರೆ. ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ‌ದ ಅವರು, ಬಿಎಂಟಿಸಿ ಪ್ರಯಾಣ ದರ ಏರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ...

Read More

ರಾಜ್ಯದಲ್ಲಿ ಕೊರೋನಾ 2ನೇ ಅಲೆಯಲ್ಲಿ ಮೃತಪಟ್ಟ ವೈದ್ಯರ ಸಂಖ್ಯೆ 9 : ಡಾ.ಕೆ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಮೃತಪಟ್ಟ ವೈದ್ಯರ ಸಂಖ್ಯೆ ಕಡಿಮೆ ಪ್ರಮಾಣದ್ದಾಗಿದೆ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ದೇಶದಾದ್ಯಂತ 646 ವೈದ್ಯರು ಸೋಂಕು ತಗುಲಿ ಮೃತಪಟ್ಟಿದ್ದಾರೆ. ಈ ಪೈಕಿ ರಾಜ್ಯದಲ್ಲಿ...

Read More

ಆಶಾ ಕಾರ್ಯಕರ್ತರ ಜೊತೆಗೆ ವಿಡಿಯೋ ಸಂವಾದ ನಡೆಸಿದ ಸಿಎಂ ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: ಕೊರೋನಾ ಕರ್ತವ್ಯ‌ದಲ್ಲಿ ತೊಡಗಿಸಿಕೊಂಡ ಆಶಾ ಕಾರ್ಯಕರ್ತರ ಜೊತೆಗೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಡಿಯೋ ಸಂವಾದ ನಡೆಸಿದ್ದಾರೆ. ಕೊರೋನಾ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಪಾಯದ ಸನ್ನಿವೇಶದಲ್ಲಿ ಜೀವ ಪಣಕ್ಕಿಟ್ಟು ದುಡಿಯುವ...

Read More

ಕೊರೋನಾ ಲಾಕ್ಡೌನ್: ಅಧ್ಯಯನ ನಡೆಸಿ ಅನ್‌ಲಾಕ್ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧಾರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ‌ಲ್ಲಿ ಕೊರೋನಾ ಸೋಂಕಿತರ ಅಬ್ಬರ ತಗ್ಗುತ್ತಿರುವ ಬೆನ್ನಲ್ಲೇ ,ಕಾದು ನೋಡಿ ಅನ್‌ಲಾಕ್ ಪ್ರಕ್ರಿಯೆ‌ಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿರುವುದಾಗಿ ಮೂಲಗಳು ಹೇಳಿವೆ. ಕೊರೋನಾ ಮೊದಲನೇ ಅಲೆಯ ಸಂದರ್ಭದಲ್ಲಿ ಆಗಿದ್ದ ತಪ್ಪುಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಿರುವ ಸರ್ಕಾರ, ಈ...

Read More

ಬೀದಿಬದಿ ವ್ಯಾಪಾರಿಗಳ ಖಾತೆಗೆ ತಲಾ ರೂ 2 ಸಾವಿರ ಬಿಡುಗಡೆ ಪ್ರಕ್ರಿಯೆಗೆ ಸಿಎಂ ಚಾಲನೆ

ಬೆಂಗಳೂರು: ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಆರ್ಥಿಕ ಪ್ಯಾಕೇಜ್‌ನಲ್ಲಿ ಸರ್ಕಾರ ಬೀದಿ ಬದಿ ವ್ಯಾಪಾರಸ್ಥರಿಗೆ ಘೋಷಣೆ ಮಾಡಿದ ತಲಾ 2 ಸಾವಿರ ರೂ. ಸಹಾಯಧನ ವರ್ಗಾವಣೆ‌ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು. ಈ ಪರಿಹಾರ ಧನ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ...

Read More

ಪರಿಸರ ಸ್ನೇಹಿ ಮಾಸ್ಕ್ ತಯಾರಿಸಿದ ನಿತಿನ್ ವಾಸ್‌ಗೆ ದ.ಕ ಬಿಜೆಪಿ‌ ವತಿಯಿಂದ ಅಭಿನಂದನೆ

ಮೂಡುಬಿದಿರೆ: ವಿಧಾನ ಸಭಾ ಕ್ಷೇತ್ರದ ಪಕ್ಷಿಕೆರೆಯ ನಿತಿನ್ ವಾಸ್‌ ಅವರು ಪರಿಸರ ಸ್ನೇಹಿ ಮಾಸ್ಕನ್ನು ತಯಾರಿಸಿ ವಿಶ್ವದಾದ್ಯಂತ ಮನ್ನಣೆ ಗಳಿಸಿದ್ದಾರೆ. ಆ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಿದ್ದಾರೆ. ಕೇವಲ ಪರಿಸರ ಸ್ನೇಹಿ ಮಾಸ್ಕ್ ಮಾತ್ರ‌ವಲ್ಲದೆ ಈ...

Read More

ಆಗಸ್ಟ್ 28, 29 ರಂದು ಸಿಇಟಿ ಪರೀಕ್ಷೆ: ಡಾ ಅಶ್ವತ್ಥ್ ನಾರಾಯಣ್ ಘೋಷಣೆ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ‌ಕ್ಕೆ ಪಿಯುಸಿ ಅಂಕಗಳನ್ನು ಈ ಬಾರಿ ಪರಿಗಣಿಸದಿರಲು ಸರ್ಕಾರ ನಿರ್ಧರಿಸಿದೆ. ಜೊತೆಗೆ, ಸಿಇಟಿ ಪರೀಕ್ಷೆ‌ಗೂ ರಾಜ್ಯ ಸರ್ಕಾರ ದಿನ ನಿಗದಿ ಮಾಡಿದೆ. ಈ ಸಂಬಂಧ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ಅವರು ಮಾತನಾಡಿದ್ದು, ಆಗಸ್ಟ್ ತಿಂಗಳ 28...

Read More

ಬೆಂಗಳೂರು: ಫುಟ್ಪಾತ್‌ಗಳಲ್ಲಿನ ಅಪಾಯಕಾರಿ ಟ್ರಾನ್ಸ್‌ಫಾರ್ಮರ್‌ಗಳ ಅಧ್ಯಯನಕ್ಕೆ ಸಮನ್ವಯ ಸಮಿತಿ ರಚನೆ

ಬೆಂಗಳೂರು: ನಗರಕ್ಕೆ ಸಂಬಂಧಿಸಿದಂತೆ ಫುಟ್ಪಾತ್‌ಗಳ ಮೇಲಿನ ಟ್ರಾನ್ಸ್‌ಫಾರ್ಮರ್‌ಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಅಧ್ಯಯನ ನಡೆಸಲು ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ಸಮನ್ವಯ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ನಗರದ ಫುಟ್ಪಾತ್‌ಗಳಲ್ಲಿ ಅಪಾಯಕಾರಿಯಾಗಿರುವ ಟ್ರಾನ್ಸ್‌ಫಾರ್ಮರ್‌ಗಳ ತೆರವಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ನಿವೃತ್ತ ವಿಂಗ್ ಕಮಾಂಡರ್ ಜಿ ಬಿ...

Read More

Recent News

Back To Top