ನವದೆಹಲಿ: 2018-18ನೇ ಸಾಲಿನ ಹಣಕಾಸು ವರ್ಷ ಮಾ.31ರಂದು ಅಂತ್ಯವಾಗಲಿದೆ. ಆದರೆ ಈ ದಿನ ಆದಾಯ ತೆರಿಗೆ ಪಾವತಿ ಮಾಡದವರಿಗೂ ಅತ್ಯಂತ ಪ್ರಮುಖ ದಿನವಾಗಿದೆ. ಎರಡು ವರ್ಷಗಳ ಆದಾಯ ತೆರಿಗೆ ಪಾವತಿಗೆ ಇದು ಕಡೆಯ ದಿನವಾಗಿದೆ.
ಈ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಕಛೇರಿಗಳು ಶನಿವಾರ ಮತ್ತು ಭಾನುವಾರ ಕೂಡ ತೆರೆದಿರಲಿದೆ. ಕೊನೆ ಗಳಿಗೆಯಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಇದರಿಂದ ಸಹಾಯಕವಾಗಲಿದೆ.
2016-17 ಮತ್ತು 2017-18ನೇ ವರ್ಷದ ಆದಾಯ ತೆರಿಗೆ ಪಾವತಿಯನ್ನು ಮಾ.೩೧ರೊಳಗೆ ಮಾಡಬೇಕಿದೆ. ಇಲ್ಲವಾದರೆ ದಂಡ ತೆರಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.