ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆಯ ’30 ಅಂಡರ್ 30 ಏಷ್ಯಾ’ ಪಟ್ಟಿಯಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ನಟಿ ಅನುಷ್ಕಾ ಶರ್ಮಾ ಮುಂತಾದ ಭಾರತೀಯರು ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮನೋರಂಜನೆ, ಕ್ರೀಡೆ, ಉದ್ಯಮ, ಸಮಾಜಸೇವೆ, ಹಣಕಾಸು ಮುಂತಾದ ವಲಯಗಳಿಗೆ ಸಂಬಂಧಿಸಿದ 30 ವರ್ಷದೊಳಗಿನ ಸಾಧಕರನ್ನು ಈ ಪಟ್ಟಿಗೆ ಆಯ್ಕೆ ಮಾಡಲಾಗಿದೆ.
ಅವರ ಸಾಧನೆ ಸಮಾಜದ ಮೇಲೆ ಬೀರಿದ ಪ್ರಭಾವ, ಸುದೀರ್ಘಾವಧಿಯಲ್ಲಿ ಸಾಧಕರಾಗಿ ಉಳಿಯುವಲ್ಲಿನ ಅವರ ಸಾಮರ್ಥ್ಯ ಮತ್ತು ಪ್ರಸ್ತುತ ಸ್ಥಾನಮಾನ ಬದಲಿಸುವ ಅವರ ಸಾಮರ್ಥ್ಯವನ್ನು ಪರಿಗಣಿಸಿ ಈ ಪಟ್ಟಿಯನ್ನು ಮಾಡಲಾಗಿದೆ.
ಭಾರತೀಯರಾದ ಅಂಜಲಿ ಬಾತ್ರ, ಭೂಮಿಕಾ ರೋರ, ನಿಶಾಂತ್ ಛೋಪ್ರಾ, ತೃಷ್ಣಿತ್ ಅರೋರ, ರಾಘವ್ ಸರಿನ್ ಮುಂತಾದವರ ಹೆಸರು ಪಟ್ಟಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.