ವಾರಣಾಸಿ: ವಿದ್ಯುತ್ ಸಂಪರ್ಕವನ್ನು ಪಡೆದು 86 ವರ್ಷಗಳ ಬಳಿಕ ವಾರಣಾಸಿ ನಗರ ಸಂಪೂರ್ಣವಾಗಿ ವೈಯರ್ಲೆಸ್ಗೊಂಡಿದೆ. ವಿದ್ಯುತ್ ಕಂಬ, ತಂತಿಗಳಿಂದ ಅಲ್ಲಿನ ಜನರು ಕೊನೆಗೂ ಮುಕ್ತಿ ಪಡೆದುಕೊಂಡಿದ್ದಾರೆ. ಅಂಡರ್ಗ್ರೌಂಡ್ ತಂತಿ ಯೋಜನೆ ಅಲ್ಲಿ ಸಂಪೂರ್ಣಗೊಂಡಿದೆ.
ಮಾಜಿ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಅವರು ವಾರಣಾಸಿಯಲ್ಲಿ ರೂ.432 ಕೋಟಿ ವೆಚ್ಚದಲ್ಲಿ ಅಂಡರ್ಗ್ರೌಂಡ್ ಕೇಬಲ್ ವರ್ಕ್ನ್ನು ಘೋಷಣೆ ಮಾಡಿದ್ದರು. 2015ರಲ್ಲಿ ಈ ಯೋಜನೆ ಕಾರ್ಯಾರಂಭಗೊಂಡಿತ್ತು. ಎರಡು ವರ್ಷದಲ್ಲಿ ಈ ಕಾರ್ಯ ಪೂರ್ಣಗೊಂಡಿದೆ.
ಗೊಂಚಲು ಗೊಂಚಲಾಗಿ ನೇತಾಡುತ್ತಿದ್ದ ವಿದ್ಯುತ್ ತಂತಿಗಳು ವಾರಣಾಸಿಯಲ್ಲಿ ಈಗ ಕಣ್ಮರೆಯಾಗಿವೆ. 16 ಸ್ಕ್ವೇರ್ ಕಿಲೋಮೀಟರ್ವರೆಗಿನ ಪ್ರದೇಶದಲ್ಲಿ ಅಂಡರ್ಗ್ರೌಂಡ್ ತಂತಿ ಅಳವಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.