ನವದೆಹಲಿ: ಭಾರತ ಮತ್ತು ಭಾರತೀಯರ ಸಾಧನೆಗಳ ಬಗ್ಗೆ ನನಗಿರುವ ಗೌರವ ನನ್ನನ್ನು ಪ್ರತಿಸಲ ಭಾರತಕ್ಕೆ ಆಗಮಿಸುವಂತೆ ಮಾಡುತ್ತದೆ ಎಂಬುದಾಗಿ ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಹೇಳಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಅವರು ಈ ಮಾತನ್ನು ಹೇಳಿದರು.
‘ಹಲವಾರು ಬಾರಿ ಭಾರತಕ್ಕೆ ಆಗಮಿಸಿದ್ದೇನೆ. ಆದರೆ ಜರ್ಮನ್ ಅಧ್ಯಕ್ಷನಾಗಿ ಇದು ನನ್ನ ಮೊದಲ ಭೇಟಿ. ಭಾರತ ಮತ್ತು ಭಾರತೀಯರ ಸಾಧನೆಗಳ ಬಗ್ಗೆ ನನಗಿರುವ ಗೌರವ ಪ್ರತಿಬಾರಿ ನನ್ನನ್ನು ಇಲ್ಲಿಗೆ ಆಗಮಿಸುವಂತೆ ಮಾಡುತ್ತದೆ’ ಎಂದಿದ್ದಾರೆ.
ಬಳಿಕ ಮಹಾತ್ಮ ಗಾಂಧೀಜಿಯ ಸಮಾಧಿಗೆ ತೆರಳಿ ಅವರು ಪುಷ್ಪ ನಮನಗಳನ್ನು ಸಲ್ಲಿಸಿದರು.
ಮಾ.22ರಂದು ನಾಲ್ಕು ದಿವಸಗಳ ಭಾರತ ಪ್ರವಾಸಕ್ಕಾಗಿ ಅವರು ಪತ್ನಿಯೊಂದಿಗೆ ಆಗಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.