ನವದೆಹಲಿ: ಭಾರತದ ಮೊದಲ ಸಂಜ್ಞಾ ಭಾಷಾ ಡಿಕ್ಷನರಿಯನ್ನು ಕೇಂದ್ರ ಸಾಮಾಜಿಕ ನ್ಯಾಯ ಸಚಿತ ತಾವರ್ಚಂದ್ ಗೆಹ್ಲೋಟ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದ್ದಾರೆ. ಒಟ್ಟು 3 ಸಾವಿರ ಶಬ್ದಗಳನ್ನು ಇದು ಒಳಗೊಂಡಿದೆ.
ಈ ಡಿಕ್ಷನರಿಯನ್ನು ಭಾರತೀಯ ಸಂಜ್ಞಾ ಭಾಷಾ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಅಭಿವೃದ್ಧಿಪಡಿಸಿದೆ. ಶ್ರವಣ ದೋಷವುಳ್ಳ ಮತ್ತು ಸಾಮಾನ್ಯ ಜನರ ನಡುವಣ ಸಂವಹನ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಈ ಡಿಕ್ಷನರಿಯನ್ನು ಹೊರತರಲಾಗಿದೆ.
ಸಂಜ್ಞಾ ಭಾಷೆಯ ಬಗ್ಗೆ ಹೆಚ್ಚಿನ ವಿವರಗಳು, ಮಾಹಿತಿಗಳು ಇದರಲ್ಲಿದೆ. ಕಿವುಡ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇದು ಉತ್ತೇಜಿಸಲಿದೆ ಮತ್ತು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಇದು ನರೆವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.