ಮುಂಬಯಿ: ಭಾರತದ ಪೌರಾಣಿಕ ಕಥೆ ಮಹಾಭಾರತದ ಬಗ್ಗೆ ಇದುವರೆಗೆ ಯಾರೂ ಸಿನಿಮಾವನ್ನು ಮಾಡಿಲ್ಲ, ಆದರೆ ಭವಿಷ್ಯದಲ್ಲಿ ಈ ಮಹಾಕಾವ್ಯ ಸಿನಿಮಾವಾಗಿ ಪ್ರೇಕ್ಷಕರೆದುರು ಬರುವ ಎಲ್ಲಾ ಲಕ್ಷಣಗಳು ಇವೆ. ಈಗಾಗಲೇ ಖ್ಯಾತ ಉದ್ಯಮಿ ಬಿ.ಆರ್ ಶೆಟ್ಟಿ ಭೀಮ ಕೇಂದ್ರಿತ ಮಹಾಭಾರತ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅವರ ಬೆನ್ನಲ್ಲೇ ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಉದ್ಯಮಿ ಮುಕೇಶ್ ಅಂಬಾನಿ ಮಹಾಭಾರತ ಕಥೆಯಿಟ್ಟುಕೊಂಡು ಸಿನಿಮಾ ನಿರ್ಮಿಸುವ ಸಾಹಸಕ್ಕೆ ಕೈಹಾಕಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಸ್ತುತ ಥಗ್ಸ್ ಆಫ್ ಹಿಂದೋಸ್ಥಾನ್ನಲ್ಲಿ ಬ್ಯೂಸಿಯಾಗಿರುವ ಅಮೀರ್ ಅದಾದ ಬಳಿಕ ಮಹಾಭಾರತ ಸಿನಿಮಾ ನಿರ್ಮಾಣ ಕಾರ್ಯ ಮಾಡಲಿದ್ದಾರೆ ಎನ್ನಲಾಗಿದೆ. ಅಂಬಾನಿ ಹಣ ಹೂಡಿಕೆ ಮಾಡಲಿದ್ದಾರೆ. ಇದುವರೆಗೆ ಕಾಣದ ಅತೀದೊಡ್ಡ ಬಜೆಟ್ನ ಸಿನಿಮಾ ಇದಾಗಲಿದೆ ಎನ್ನಲಾಗಿದೆ.
‘ಮಹಾಭಾರತದ ಬಗ್ಗೆ ಸಿನಿಮಾ ಮಾಡುವುದು ನನ್ನ ಅತೀದೊಡ್ಡ ಕನಸು. ಆದರೆ ಅದನ್ನು ಮಾಡಲು ನನಗೆ ಭಯವಾಗುತ್ತಿದೆ. ಯಾಕೆಂದರೆ ಅದು ನನ್ನ ಜೀವನದ 10-15 ವರ್ಷಗಳನ್ನು ತೆಗೆದುಕೊಳ್ಳಬಹುದು. ಕರ್ಣ ನನಗೆ ಅತೀ ಇಷ್ಟವಾದ ಪಾತ್ರ. ಆದರೆ ನನ್ನ ದೈಹಿಕ ಆಕಾರ ಆತನಿಗೆ ಒಪ್ಪುವುದಿಲ್ಲ. ಶ್ರೀಕೃಷ್ಣನ ಪಾತ್ರವನ್ನು ಮಾಡಬಹುದು. ಅರ್ಜುನ ಕೂಡ ಅತ್ಯಂತ ಇಷ್ಟವಾದ ಪಾತ್ರ ನನಗೆ’ ಎಂದು ಅಮೀರ್ ಈ ಹಿಂದೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.