ನವದೆಹಲಿ: ಇರಾಕ್ನ ಮಸೂಲ್ನಲ್ಲಿ ಇಸಿಸ್ ಉಗ್ರರಿಂದ ಅಪಹರಿಸಲ್ಪಟ್ಟ 39 ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಸತ್ತಿನಲ್ಲಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
‘ಎಲ್ಲಾ 39 ಮಂದಿ ಅಪಹೃತರು ಮೃತಪಟ್ಟಿದ್ದಾರೆ, ಅವರ ಮೃತದೇಹಗಳು ಪತ್ತೆಯಾಗಿವೆ. ಇವುಗಳನ್ನು ಬಾಗ್ದಾದ್ಗೆ ಸ್ಥಳಾಂತರ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಮೃತದೇಹಗಳ ಗುರುತು ಹಿಡಿಯುವ ಸಲುವಾಗಿ ಸಂಬಂಧಿಕರ ಡಿಎನ್ಎ ಸ್ಯಾಂಪಲ್ಗಳನ್ನು ಕಳುಹಿಸಿಕೊಡಲಾಗುತ್ತಿದೆ. ಪಂಜಾಬ್, ಹಿಮಾಚಲ ಪ್ರದೇಶ, ಪಶ್ಚಿಮಬಂಗಾಳ, ಬಿಹಾರ ರಾಜ್ಯ ಸರ್ಕಾರಗಳು ಈ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದಿದ್ದಾರೆ.
ಸಚಿವ ಜನರಲ್ ವಿಕೆ ಸಿಂಗ್ ಅವರು ಇರಾಕ್ಗೆ ತೆರಳಿ ಮೃತದೇಹಗಳನ್ನು ವಾಪಾಸ್ ತರುವ ಕಾರ್ಯ ಮಾಡಲಿದ್ದಾರೆ. ಮೃತದೇಹ ಹೊತ್ತ ವಿಮಾನ ಮೊದಲಿ ಅಮೃತಸರಕ್ಕೆ ಆಗಮಿಸಿ, ಅಲ್ಲಿಂದ ಪಾಟ್ನಾ, ಕೋಲ್ಕತ್ತಾಗಳಿಗೆ ಆಗಮಿಸಲಿದೆ ಎಂದಿದ್ದಾರೆ.
2014ರಲ್ಲಿ ಈ 39 ಮಂದಿಯನ್ನು ಇಸಿಸ್ ಉಗ್ರರು ಅಪಹರಿಸಿದ್ದರು, ಹಲವು ಸಮಯ ಒತ್ತೆಯಿರಿಸಿ ಬಳಿಕ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.