ನವದೆಹಲಿ: 56 ವರ್ಷದ ಇಸ್ರೋದಲ್ಲಿ ವಿಜ್ಞಾನಿಯಾಗಿರುವ ಮಹಿಳೆಯೊಬ್ಬರು ವಿಶ್ವದ ಅತ್ಯಂತ ತಣ್ಣನೆಯ ಪ್ರದೇಶ ಎಂದು ಕರೆಯಲ್ಪಡುವ ಅಂಟಾರ್ಟಿಕದಲ್ಲಿ 403 ದಿನಗಳನ್ನು ಕಳೆದಿದ್ದಾರೆ.
ನಾರಿ ಶಕ್ತಿಗೆ ಪಕ್ಕಾ ಉದಾಹರಣೆಯಾಗಿರುವ ಮಂಗಳ ಮಣಿ -90 ಡಿಗ್ರಿ ತಾಪಮಾನ ಇರುವ ಅಂಟಾರ್ಟಿಕದಲ್ಲಿ 403 ದಿನ ಕಳೆದಿದ್ದಾರೆ. ಈ ಸಾಹಸಕ್ಕೂ ಮುನ್ನ ಅವರು ಯಾವತ್ತೂ ಹಿಮಪಾತಗಳನ್ನು ನೋಡೇ ಇಲ್ಲ ಎಂಬುದು ವಿಶೇಷ.
ಒಟ್ಟು 23 ಮಂದಿಯ ತಂಡ ಅಂಟಾರ್ಟಿಕದ ಭಾರತಿ ರಿಸರ್ಚ್ ಸ್ಟೇಶನ್ಗೆ ಅಧ್ಯಯನದ ನಿಮಿತ್ತ ತೆರಳಿತ್ತು. ಈ ತಂಡದಲ್ಲಿದ್ದ ಏಕೈಕ ಮಹಿಳೆ ಮಣಿ ಆಗಿದ್ದಾರೆ. ತಮ್ಮ ಮಿಶನ್ನನ್ನು ಅವರು ಕಳೆದ ಡಿಸೆಂಬರ್ನಲ್ಲಿ ಪೂರ್ಣಗೊಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.