ನವದೆಹಲಿ: ಏರ್ಪೋರ್ಟ್ನಲ್ಲಿ ಕಳೆದು ಹೋದ ವಸ್ತುಗಳನ್ನು ಗ್ರಾಹಕರಿಗೆ ಹುಡುಕಿ ಕೊಡುವ ಸಲುವಾಗಿಯೇ ಕೇಂದ್ರ ಕೈಗಾರಿಕ ಭದ್ರತಾ ಪಡೆ(ಸಿಐಎಸ್ಎಫ್) ‘ಲಾಸ್ಟ್ ಆಂಡ್ ಫೌಂಡ್’ ಎಂಬ ಆ್ಯಪ್ ವೊಂದನ್ನು ತಯಾರಿಸಿದೆ.
ಐಟಿ ಸಚಿವಾಲಯದ ವೆಬ್ಸೈಟ್ನಿಂದ ಇದನ್ನು ಡೌನ್ಲೋಡ್ ಮಾಡಿಕೊಂಡು ರಿಜಿಸ್ಟರ್ ಆಗಬೇಕಿದೆ.
ಇದರಲ್ಲಿ ಗ್ರಾಹಕರು ನೇರವಾಗಿ ದೂರುಗಳನ್ನು ದಾಖಲು ಮಾಡಿ, ತಮ್ಮ ಕಳೆದು ಹೋದ ವಸ್ತುಗಳ ಬಗ್ಗೆ ದೂರು ನೀಡಬಹುದಾಗಿದೆ. ಇದರ ಸ್ಟೇಟಸ್ ಟ್ರ್ಯಾಕ್ ಮಾಡಬಹುದಾಗಿದೆ. ಅಲ್ಲದೇ ಆಪ್ ಬಳಸಿ ಸಿಐಎಸ್ಎಫ್ನಿಂತ ತಾಂತ್ರಿಕ ಸಲಹೆಯನ್ನೂ ಪಡೆದುಕೊಳ್ಳಬಹುದಾಗಿದೆ.
ಈ ಆಪ್ನ ವೆಬ್ ವರ್ಶನ್ನಲ್ಲಿ ಪತ್ತೆಯಾದ ವಸ್ತುಗಳ ಫೋಟೋಗಳನ್ನು ಹಾಕಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.