ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂತಾದ ನಾಯಕರುಗಳಿಗೆ ಅಪಾರ ಸಂಖ್ಯೆಯ ನಕಲಿ ಫಾಲೋವರ್ಗಳಿದ್ದಾರೆ ಎಂಬ ‘ಟ್ವಿಟರ್ ಆಡಿಟ್’ ವರದಿ ಆಧಾರ ರಹಿತವಾದುದು ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ.
ಪ್ರಕಟನೆ ಹೊರಡಿಸಿರುವ ಟ್ವಿಟರ್ , ‘ಟ್ವಟಿರ್ ಆಡಿಟ್’ನ ನಕಲಿ ಫಾಲೋವರ್ಗಳ ವರದಿ ನಮ್ಮ ಸಂಸ್ಥೆಯದಲ್ಲ ಎಂದು ಸ್ಪಷ್ಟಪಡಿಸಿದೆ.
ಅಲ್ಲದೇ ಸಮೀಕ್ಷೆಯಲ್ಲಿ ಟ್ವಿಟರ್ ಆಡಿಟ್ ಬಳಸಿರುವ ವಿಧಾನ ಸಂಪೂರ್ಣವಾಗಿ ದೋಷಪೂರಿತವಾಗಿದೆ ಮತ್ತು ಅವರ ಸತ್ಯಕ್ಕೆ ದೂರವಾದ ವರದಿಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದಿದೆ.
ಟ್ವಿಟರ್ ಆಡಿಟ್ ವರದಿಯಲ್ಲಿ ಮೋದಿಯವರಿಗೆ ಶೇ.60ರಷ್ಟು ನಕಲಿ ಫಾಲೋವರ್ಗಳಿದ್ದಾರೆ, ರಾಹುಲ್ ಗಾಂಧಿ ಅವರಿಗೆ ಶೇ.67ರಷ್ಟು ನಕಲಿ ಫಾಲೋವರ್ಗಳಿದ್ದಾರೆ. ಅಮಿತ್ ಷಾ, ಶಶಿ ತರೂರ್ಗೂ ಸಾಕಷ್ಟು ನಕಲಿ ಫಾಲೋವರ್ಗಳಿದ್ದಾರೆ ಎಂದು ಹೇಳಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.