ಮುಂಬಯಿ: ಸಾರಿಗೆ ನಿಯಮಗಳನ್ನು ಗಾಳಿಗೆ ತೂರುವ ಚಾಲಕರಿಗೆ ಇನ್ನು ಮುಂದೆ ಮಹಾರಾಷ್ಟ್ರ ಸರ್ಕಾರ ಇ-ಚಲನ್ಗಳನ್ನು ನೀಡಲಿದೆ. ಇದರಿಂದ ಟ್ರಾಫಿಕ್ ದಟ್ಟಣೆ, ವಾಗ್ವಾದಗಳನ್ನು ತಪ್ಪಿಸಲು ಸಾಧ್ಯವಾಗಲಿದೆ.
ಮೂಲಗಳ ಪ್ರಕಾರ ಮಹಾ ಸರ್ಕಾರ ಶೀಘ್ರದಲ್ಲೇ 60 ಕೋಟಿ ರೂಪಾಯಿ ವೆಚ್ಚದಲ್ಲಿ ‘ಒನ್ ಸ್ಟೇಟ್ ಒನ್ ಇ-ಚಲನ್’ ಯೋಜನೆಯನ್ನು ಜಾರಿಗೆ ತರಲಿದೆ, ಇದರನ್ವಯ ಜಿಲ್ಲೆ, ತಾಲೂಕುಗಳ ಬೇಧವಿಲ್ಲದೆ ಎಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೂ ಇ-ಚಲನ್ಗಳನ್ನು ನೀಡಲಾಗುತ್ತದೆ.
ಇದರಲ್ಲಿ ಹಣ ವರ್ಗಾವಣೆ ನಗರದು ರಹಿತವಾಗಿರಲಿದೆ, ನಿಯಮ ಉಲ್ಲಂಘಕರು ತಮ್ಮ ಮೊಬೈಲ್ನಲ್ಲಿ ಇ-ಚಲನ್ ಪಡೆಯಲಿದ್ದಾರೆ. ಅದನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.