ನವದೆಹಲಿ: ಭಾರತೀಯ ವಾಯುಸೇನೆಯ ಅತೀದೊಡ್ಡ ಸಾರಿಗೆ ಏರ್ಕ್ರಾಫ್ಟ್ ಸಿ-17 ಗ್ಲೋಬ್ಮಾಸ್ಟರ್ ಬುಧವಾರ ಚೀನಾ ಗಡಿ ಸಮೀಪವಿರುವ ಅರುಣಾಚಲ ಪ್ರದೇಶದ ಟುಟಿಂಗ್ ಏರ್ಫೀಲ್ಡ್ನಲ್ಲಿ ಲ್ಯಾಂಡ್ ಆಗಿದೆ.
ಗಡಿ ರಾಜ್ಯಗಳಲ್ಲಿ ತಂತ್ರಗಾರಿಕೆಯಿಂದ ಬಹುಮುಖ ಕಾರ್ಯಾಚರಣೆಗಳನ್ನು ಬಲಿಷ್ಠಗೊಳಿಸುವ ವಾಯುಸೇನೆಯ ಪ್ರಯತ್ನದ ಭಾಗವಾಗಿ ಈ ಅಮೆರಿಕಾ ನಿರ್ಮಿತ ಏರ್ಕ್ರಾಫ್ಟ್ನ್ನು ಟುಟಿಂಗ್ ಏರ್ಫೀಲ್ಡ್ನಲ್ಲಿ ಇಳಿಸಲಾಗಿದೆ.
‘ಟುಟಿಂಗ್ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ನಲ್ಲಿ ಸಿ17 ಗ್ಲೋಬ್ಮಾಸ್ಟರ್ ಐತಿಹಾಸಿಕ ಲ್ಯಾಂಡಿಂಗ್ ಕಂಡಿದೆ. ಸುಲಲಿತವಾಗಿ ಈ ಕಾರ್ಯವನ್ನು ಮಾಡಲಾಗಿದ್ದು, ಪೈಲೆಟ್ಗಳು ತಮ್ಮ ಅದ್ಭುತ ಹಾರಾಟ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ’ ಎಂದು ವಾಯುಸೇನೆ ವಕ್ತಾರರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.