ನವದೆಹಲಿ: ವಾಯುಮಾಲಿನ್ಯ ಮತ್ತು ಕಚ್ಛಾತೈಲದ ಆಮದನ್ನು ತಗ್ಗಿಸುವ ಸಲುವಾಗಿ ಎಲೆಕ್ಟ್ರಿಕ್ ವೆಹ್ಹಿಕಲ್ಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಬೆಂಬಲ ನೀಡುತ್ತಿರುವ ಇಸ್ರೋ ತಾನು ಅಗ್ಗದ ಬ್ಯಾಟರಿಗಳನ್ನು ಸಿದ್ಧಪಡಿಸಲು ಕಂಡುಹಿಡಿದ ತಂತ್ರಜ್ಞಾನಗಳನ್ನು ಅಟೋಮೊಬೈಲ್ ಇಂಡಸ್ಟ್ರಿಗಳಿಗೆ ವರ್ಗಾವಣೆ ಮಾಡುತ್ತಿದೆ.
ಎಲೆಕ್ಟ್ರಿಕ್ ವೆಹ್ಹಿಕಲ್ಗಳಲ್ಲಿ ವಾಣಿಜ್ಯ ಕಾರಣಕ್ಕಾಗಿ ಬಳಸಬಹುದಾದ ಬ್ಯಾಟರಿಗಳನ್ನು ಅತೀಕಡಿಮೆ ದರದಲ್ಲಿ ಸಿದ್ಧಪಡಿಸುವ ತಂತ್ರಜ್ಞಾನವನ್ನು ಇಸ್ರೋ ಕಂಡುಹಿಡಿದಿದೆ. ಇದೀಗ ಈ ತಂತ್ರಜ್ಞಾನವನ್ನು ಅದು ವಾಹನ ತಯಾರಕ ಕಂಪನಿಗಳಿಗೆ ನೀಡಲು ಸಜ್ಜಾಗಿದೆ.
ಸ್ಪೇಸ್ ಬ್ಯಾಟರಿಗಳನ್ನು ಕಡಿಮೆ ದರದಲ್ಲಿ ತಯಾರಿಸುವ ತಂತ್ರಜ್ಞಾನ ನಮ್ಮ ಬಳಿ ಇದು, ಇದನ್ನು ಇ-ವೆಹ್ಹಿಕಲ್ಗಳಲ್ಲಿ ಬಳಸುವ ಸಲುವಾಗಿ ಅಟೋಮೊಬೈಲ್ ಇಂಡಸ್ಟ್ರಿಗಳಿಗೆ ನೀಡಲಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಡಾ.ಕೆ.ಶಿವನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.