ಹೈದರಾಬಾದ್: ದಿನದಿಂದ ದಿನಕ್ಕೆ ದೇಶದ ರೈಲ್ವೇ ನಿಲ್ದಾಣಗಳು, ವಿಮಾನನಿಲ್ದಾಣಗಳು ಮಹಿಳಾ ಸ್ನೇಹಿಯಾಗುತ್ತಿವೆ. ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ. ಇದೀಗ ಹೈದರಾಬಾದ್ನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಶಿನ್ ಅಳವಡಿಸಿರುವುದು ಇದಕ್ಕೆ ಸಾಕ್ಷಿ.
ಮಹಿಳಾ ಪ್ರಯಾಣಿಕರಿಗೆ ಸುಖಕರ ಪ್ರಯಾಣವನ್ನು ಒದಗಿಸುವ ಮತ್ತು ನೈರ್ಮಲ್ಯವನ್ನು ಉತ್ತೇಜಿಸುವ ಸಲುವಾಗಿ ಕಾಯಿನ್ ಹಾಕಿ ಪ್ಯಾಡ್ ಪಡೆಯುವ ಮೆಶಿನನ್ನು ಅಳವಡಿಕೆ ಮಾಡಲಾಗಿದೆ. ಕೇವಲ ರೂ.5ರ ನಾಣ್ಯ ಹಾಕಿ ಪ್ಯಾಡ್ಗಳನ್ನು ಪಡೆಯಬಹುದು.
26 ಲೇಡಿಸ್ ವಾಶ್ರೂಮ್ಗಳಲ್ಲಿ ಈ ವೆಂಡಿಂಗ್ ಮೆಶಿನ್ ಅಳವಡಿಸಲಾಗಿದೆ, ಪ್ಯಾಡ್ಗಳನ್ನು ಸುಟ್ಟು ಭಸ್ಮ ಮಾಡುವ ಮೆಶಿನ್ ಕೂಡ ಇಲ್ಲಿ ಅಳವಡಿಸಲಾಗಿದೆ. ಏರ್ಪೋಟ್ ಹೌಸ್ಕೀಪಿಂಗ್ ಇದರ ನಿರ್ವಹಣೆಯನ್ನು ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.