ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಭಾರತ ಸರ್ಕಾರವು ಅತೀ ಅಗ್ಗದ ಸ್ಯಾನಿಟರಿ ಪ್ಯಾಡ್ ಯೋಜನೆ ‘ಸುವಿಧಾ’ಗೆ ಚಾಲನೆಯನ್ನು ನೀಡಿದೆ. ಶೇ.100ರಷ್ಟು ಬಯೋಡಿಗ್ರೇಡೇಬಲ್ ಪ್ಯಾಡ್ ಇದಾಗಿದೆ.
ಈ ಯೋಜನೆಯಡಿ ಕೇವಲ ರೂ.2.50 ರೂಪಾಯಿಗೆ 4 ಪ್ಯಾಡ್ಗಳ ಪ್ಯಾಕ್ ಸಿಗಲಿದೆ. ದೇಶದ 586 ಜಿಲ್ಲೆಗಳ ಜನ್ ಔಷಧಿ ಕೇಂದ್ರಗಳಲ್ಲಿ ಈ ಪ್ಯಾಡ್ ದೊರೆಯಲಿದೆ. ಈ ಪ್ಯಾಡ್ಗಳ ಮೌಲ್ಯ ರೂ.8 ಆಗಿದ್ದು, ಇದನ್ನು ಸರ್ಕಾರ ರೂ.2.50ಕ್ಕೆ ಇಳಿಸಿ ಮಾರಾಟ ಮಾಡುತ್ತಿದೆ. ಮಾರುಕಟ್ಟೆ ದರಕ್ಕಿಂತ ಸಾಕಷ್ಟು ಅಗ್ಗದಲ್ಲಿ ಇವು ಸಿಗುತ್ತಿವೆ.
ಋತುಸ್ರಾವದ ವೇಳೆಯಲ್ಲಿ ನೈರ್ಮಲ್ಯವನ್ನು ಕಾಪಾಡುವ ಸಲುವಾಗಿ ಸ್ಯಾನಿಟರಿ ಪ್ಯಾಡ್ಗಳ ಬಳಕೆಗೆ ಉತ್ತೇಜನವನ್ನು ನೀಡಲಾಗುತ್ತಿದೆ. ಪ್ಯಾಡ್ಗಳ ಮೇಲಿನ ಜಿಎಸ್ಟಿ ತೆಗೆಯುವಂತೆ ತೀವ್ರ ಒತ್ತಾಯಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಸರ್ಕಾರ ಅತೀಕಡಿಮೆ ದರಕ್ಕೆ ಸ್ಯಾನಿಟರಿ ಪ್ಯಾಡ್ಗಳನ್ನು ಬಿಟ್ಟಿರುವುದು ಶ್ಲಾಘನಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.