ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಮೇಲ್ವಿಚಾರಣೆಯ ಸಂದರ್ಭ ಕರ್ತವ್ಯ ನಿರ್ವಹಿಸುತ್ತಿದ್ದ 12 ಉಪನ್ಯಾಸಕರಿಂದ ಪರೀಕ್ಷಾ ಲೋಪ ಕಂಡು ಬಂದಿರುವ ಹಿನ್ನಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.
ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ದೋಷ ಕಂಡುಬಂದಿದ್ದು, ಇದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟಿಸಿದ್ದರು. ಇದೀಗ ಪಿಯು ಮಂಡಳಿ ನಿರ್ದೇಶಕಿ ಸುಷ್ಮಾ ಗೋಡಬೋಲೆ ಅವರ ನೇತೃತ್ವದ ಮಂಡಳಿ ಸಭೆಯಲ್ಲಿ ೧೨ ಉಪನ್ಯಾಸಕರನ್ನು ಅಮಾನತುಗೊಳಿಸಲು ನಿರ್ಣಯಿಸಲಾಯಿತು.
ಮೈಸೂರಿನ ಸೇಂಟ್ ಆಂತೋನಿ ಪಿಯು ಕಾಲೇಜಿನ ಉಪನ್ಯಾಸಕಿ ಬಿ.ಶಶಿಕಲಾ, ಚಿಕ್ಕೋಡಿ ತಾಲೂಕು ಪಿಯೆಸ್ ಪಿಯು ಕಾಲೇಜು ಉಪನ್ಯಾಸಕ ಎಸ್.ಜಿ.ಖೋತ್, ಜಮಖಂಡಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಅನಿತಾ ಬಿ.ತಳವಾರ್ ಅಮಾನತುಗೊಂಡಿದ್ದು ಇನ್ನುಳಿದವರ ಅಮಾನತು ಆದೇಶ ಬುಧವಾರ ಸೂಚಿಸಲಾಗುವುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳು ಬರೆದಿದ್ದ ರಿಜಿಸ್ಟರ್ ಸಂಖ್ಯೆಯನ್ನು ಪರಿಶೀಲಿಸಬೇಕಾಗಿದ್ದ ಉಪನ್ಯಾಸಕರು, ತಪ್ಪಾಗಿ ಬರೆದಿದ್ದರೂ ಅದನ್ನು ತಿದ್ದುಪಡಿ ಮಾಡಿಸದೆ ನಿರ್ಲಕ್ಷಿಸಿದ್ದೇ ಫಲಿತಾಂಶ ಲೋಪದೋಷಕ್ಕೆ ಕಾರಣ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.