ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೈದರಾಬಾದ್ನಲ್ಲಿ ನಡೆದ ವರ್ಲ್ಡ್ ಕಾಂಗ್ರೆಸ್ ಆನ್ ಇನ್ಫಾರ್ಮೇಶನ್ ಟೆಕ್ನಾಲಜಿ(WCIT2018 ) ಅಥವಾ ಒಲಿಂಪಿಕ್ಸ್ ಆಫ್ ಐಟಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದು, ಹೊಸ ತಂತ್ರಜ್ಞಾನಗಳ ಆವಿಷ್ಕಾರದ ಹಿನ್ನಲೆಯಲ್ಲಿ ಪ್ರಸ್ತುತ ಇರುವ ಕಾರ್ಯಪಡೆಯನ್ನು ಮರುಕೌಶಲಗೊಳಿಸುವ ಅಗತ್ಯತೆಯನ್ನು ಅವರು ಸಾರಿದರು.
‘ಭವಿಷ್ಯದ ಕಾರ್ಯಸ್ಥಳಕ್ಕಾಗಿ ಕೌಶಲ್ಯಭರಿತ ನಾಗರಿಕರು ಅತ್ಯಗತ್ಯ. ಪ್ರಸ್ತುತದ ಕಾರ್ಯಪಡೆಯನ್ನೂ ಮರು ಕೌಶಲ್ಯಗೊಳಿಸಬೇಕಿದೆ. ಇಂಟೆಲಿಜೆನ್ಸ್ ಅಟೊಮೇಶನ್ ಉಗಮವಾಗುತ್ತಿರುವ ಹಿನ್ನಲೆಯಲ್ಲಿ ಉದ್ಯೋಗಗಳ ರೂಪವನ್ನೂ ಬದಲಾಯಿಸಬೇಕಾಗಿದೆ’ ಎಂದರು.
ಭಾರತ ವಿಶ್ವದಲ್ಲೇ ಅತೀಹೆಚ್ಚು ತಂತ್ರಜ್ಞಾನ ಸ್ನೇಹಿ ಜನಸಂಖ್ಯೆಯನ್ನು ಹೊಂದಿದೆ. ನಮ್ಮ 1 ಲಕ್ಷ ಗ್ರಾಮಗಳು ಆಪ್ಟಿಕಲ್ ಫೈಬರ್ ಹೊಂದಿದೆ. 121 ಕೋಟಿ ಜನಸಂಖ್ಯೆ ಮೊಬೈಲ್ ಹೊಂದಿದೆ. 120 ಕೋಟಿ ಜನ ಆಧಾರ್ ಹೊಂದಿದ್ದಾರೆ. 50 ಕೋಟಿ ಇಂಟರ್ನೆಟ್ ಬಳಕೆದಾರರು ಇದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.